ರಂಗಸಿರಿಯಿಂದ ಬಾಳೆಕೋಡಿಯಲ್ಲಿ ತಾಳಮದ್ದಳೆ
0
ಫೆಬ್ರವರಿ 25, 2019
ಬದಿಯಡ್ಕ: ಇಲ್ಲಿನ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸದಸ್ಯರಿಂದ ಬಾಳೆಕೋಡಿಯ ಶ್ರೀ ಕಾಶೀ ಕಾಳಭೈರವೇಶ್ವರ ಶಿಲಾಂಜನ ಮಠದಲ್ಲಿ ತಾಳಮದ್ದಳೆ ಇತ್ತೀಚೆಗೆ ನಡೆಯಿತು.
ಮಹಾಭಾರತ ಸರಣಿ ತಾಳಮದ್ದಳೆಯ 40ನೇ ಕಾರ್ಯಕ್ರಮವಾಗಿ ಶ್ರೀಕೃಷ್ಣ ಸಂಧಾನದಿಂದ ಆಯ್ದ `ವಿದುರಾತಿಥ್ಯ' ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ದಶಮಾನೋತ್ಸವದ ಹೊಸ್ತಿಲಲ್ಲಿರುವ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯು ನಿರಂತರವಾಗಿ ಸಾಹಿತ್ಯ, ಸಾಂಸ್ಕøತಿಕ ರಂಗದಲ್ಲಿ ಸೇವೆಸಲ್ಲಿಸುವಂತಾಗಲಿ. ಇನ್ನಷ್ಟು ಪ್ರತಿಭೆಗಳನ್ನು ಸಮಾಜಕ್ಕೆ ಈ ಸಂಸ್ಥೆಯು ನೀಡುವಂತಾಗಲೆಂದು ಪರಮಪೂಜ್ಯ ಶ್ರೀ ಸದ್ಗುರು ಡಾ.ಶಶಿಕಾಂತಮಣಿ ಸ್ವಾಮೀಜಿ ಹರಸಿದರು.
ಭಾಗವತರಾಗಿ ಪರಮಪೂಜ್ಯ ಶ್ರೀ ಸದ್ಗುರು ಡಾ.ಶಶಿಕಾಂತಮಣಿ ಸ್ವಾಮೀಜಿ ಮತ್ತು ಉದಯಶಂಕರ ಪೆರಡಾಲ ಸಹಕರಿಸಿದರು. ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಚೆಂಡೆಯಲ್ಲಿ ಹಾಗೂ ಶಿವಶಂಕರ ಭಟ್ ತಲ್ಪನಾಜೆ ಮದ್ದಳೆಯಲ್ಲಿ ಸಾಥಿ ನೀಡಿದರು. ಉತ್ತಮ ಹಿಮ್ಮೇಳ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಶಂಕರ ಸಾರಡ್ಕ ಧರ್ಮರಾಯನಾಗಿ, ರಂಗಸಿರಿಯ ಸ್ಥಾಪಕ ಕಾರ್ಯದರ್ಶಿ ಶ್ರೀಶ ಕುಮಾರ ಪಂಜಿತ್ತಡ್ಕ ಶ್ರೀಕೃಷ್ಣ್ಣನಾಗಿ, ಹಿರಿಯ ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ಭೀಮನಾಗಿ, ನಿವೃತ್ತ ಶಿಕ್ಷಕಿ ರತ್ನಾವತಿ ಟಿ.ಭಟ್ ದ್ರೌಪದಿಯಾಗಿ, ಡಾ.ಬೇ.ಸಿ ಗೋಪಾಲಕೃಷ್ಣ ಭಟ್ ವಿದುರನಾಗಿ, ಪ್ರಸ್ತುತ ರಂಗಸಿರಿಯ ಅಧ್ಯಕ್ಷೆಯಾಗಿರುವ ಪ್ರಭಾವತಿ ಕೆದಿಲಾಯ ಪುಂಡೂರು ಅರ್ಜುನನಾಗಿ ಪಾತ್ರಗಳಿಗೆ ಜೀವಂತಿಕೆ ತುಂಬಿದರು. ವೀರ, ಕರುಣೆ, ಭಕ್ತಿ ಮಿಳಿತವಾಗಿರುವ ಕಥಾಭಾಗವು ಕಲಾವಿದರ ನೈಪುಣ್ಯದಿಂದಾಗಿ ಮೆಚ್ಚುಗೆಯಾಯಿತು. ಶ್ರೀಶ ಕುಮಾರ ಪಂಜಿತ್ತಡ್ಕ ಸ್ವಾಗತಿಸಿ, ಸಂಸ್ಥೆಗೆ ಕ್ಷೇತ್ರದಲ್ಲಿ ಕಲಾಸೇವೆಯ ಅವಕಾಶ ನೀಡಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.