ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ವಿಚಾರ: ನಿಲುವು ಸ್ಪಷ್ಟಪಡಿಸಿದ ನಟ ಮೋಹನ್ ಲಾಲ್
0
ಫೆಬ್ರವರಿ 04, 2019
ಎರ್ನಾಕುಳಂ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ, ಈ ಸಂಬಂಧ ಬಿಜೆಪಿ ವರಿಷ್ಠರ ಜೊತೆ ಚರ್ಚೆ ನಡೆಸಿದ್ದಾರೆ ಎಂಬ ಎಲ್ಲಾ ಊಹಾ ಪೋಹಗಳಿಗೂ ಸ್ವತಃ ಮೋಹನ್ ಲಾಲ್ ಅವರೇ ತೆರೆ ಎಳೆದಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ತಾವು ಯಾವುದೇ ಪಕ್ಷದಿಂದಲೂ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ನಾನು ನಟನೆಯನ್ನು ಪ್ರೀತಿಸುತ್ತೇನೆ, ಹೀಗಾಗಿ ರಾಜಕೀಯಕ್ಕೆ ಬರುವುದಿಲ್ಲ ಎಂದು ಮೋಹನ್ ಲಾಲ್ ಹೇಳಿದ್ದಾರೆ.
ನಟನಾಗಿ ನಾನು ನನ್ನ ವೃತ್ತಿಯಲ್ಲಿ ಸಂತೋಷವಾಗಿದ್ದೇನೆ, ನನಗೆ ನಟನೆ ಸಾಕಷ್ಟು ಸ್ವಾತಂತ್ರ್ಯ ನೀಡಿದೆ. ರಾಜಕಾರಣಿಯಾದರೆ ಹಲವು ಮಂದಿ ನಮ್ಮನ್ನು ಅವಲಂಬಿಸುತ್ತಾರೆ. ನಾನು ಅವರಿಗಾಗಿ ನಾಟಕ ಮಾಡಬೇಕಾಗುತ್ತದೆ. ಆದರೆ ಸಿನಿ ಕ್ಷೇತ್ರದಲ್ಲಿನ ನಟನೆ ಖಷಿ ಕೊಟ್ಟಿರುವುದರಿಂದ ಬೇರೊಮದು ಕ್ಷೇತ್ರದ ನಟನೆ ನನಗೆ ಹಿಡಿಸದು ಎಮದು ಮೋಹನ್ ಲಾಲ್ ತಿಳಿಸಿದ್ದಾರೆ. ಈ ಮೂಲಕ ಈ ಬಗ್ಗೆ ವರ್ಷಗಳಿಂದ ಕೇಳಿಬರುತ್ತಿದ್ದ ಊಹಾಪೋಪಗಳಿಗೆ ತೆರೆಬಿದ್ದಿದೆ.