ವಿದ್ಯಾರ್ಥಿ ವೇತನಕ್ಕೆ ಅರ್ಜಿ
0
ಫೆಬ್ರವರಿ 08, 2019
ಕಾಸರಗೋಡು: ಈ ಶೈಕ್ಷಣಿಕ ವರ್ಷ ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ 9,ಹತ್ತನೇ ತರಗತಿಗಳಲ್ಲಿ ಕಲಿಕೆನಡೆಸುತ್ತಿರುವ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದ ಯೋಜನೆ ಪ್ರಕಾರ ಪ್ರೀಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕೋರಲಾಗಿದೆ. ಸರಕಾರಿ,ಅನುದಾನಿತ ಶಾಲೆಗಳಲ್ಲಿ ಕಲಿಕೆ ನಡೆಸುತ್ತಿರುವ, ವಾರ್ಷಿಕ ಆದಾಯ 2 ಲಕ್ಷ ರೂ.ಗಿಂತಕಡಿಮೆ ಇರುವ , ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವಪರಿಶಿಷ್ಟ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಾಲೆಯಹಿರಿಯ ಅಧಿಕಾರಿಗಳ ಮೂಲಕ ಅರ್ಜಿಯನ್ನು ಫೆ.15ರ ಮುಂಚಿತವಾಗಿ ಕಾಸರಗೋಡು ಟ್ರೈಬಲ್ ಡೆವೆಲಪ್ ಮೆಂಟ್ ಕಚೇರಿಗೆ ಸಲ್ಲಿಸಬೇಕು. ಪಟ್ಟಿಯಲ್ಲಿ ಹಾಸ್ಟೆಲರ್ ಅಥವಾ ಡೇ ಸ್ಕಾಲರ್ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.
ಹೆಚ್ಚಿನ ಮಾಹಿತಿಗೆ ಕಾಸರಗೋಡು, ಎಣ್ಮಕಜೆ, ಪನತ್ತಡಿ, ನೀಲೇಶ್ವರ ಟ್ರೈಬಲ್ ಎಕ್ಸ್ ಟೆಂಶನ್ ಕಚೇರಿಗಳನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 04994-255466.