ಮಂಜೇಶ್ವರ ಬ್ಲಾಕ್ ಪಂಚಾಯತಿ ಮುಂಗಡಪತ್ರ ಮಂಡನೆ
0
ಫೆಬ್ರವರಿ 28, 2019
ಮಂಜೇಶ್ವರ: ಮಹಿಳಾ ಸುರಕ್ಷೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಮುಂಗಡಪತ್ರ ಗುರುವಾರ ಮಂಡನೆಗೊಂಡಿದೆ.
31,15,09,131 ಆದಾಯ, 30,42,95,507 ವೆಚ್ಚ, 72,13,624 ರೂ.ಮಿಗತೆ ಬಜೆಟ್ ಮಂಡಿಸಲಾಯಿತು. ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ 1,00,00,000 ರೂ. ಕೃಷಿ ಅಭಿವೃದ್ಧಿಗೆ 1,49,50,000 ರೂ. 69 ಸಣ್ಣ ನೀರಾವರಿ ಯೋಜನೆಗಳಿಗೆ 1,80,00,000 ರೂ., ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಮೂಲಕ 21 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿರಿಸಲಾಗಿದೆ. ಪಾಲಿಯೇಟಿವ್ ಕೇರ್ ಯೋಜನೆಗೆ 14,00,000 ರೂ.,ಪರಿಶಿಷ್ಟ ಜಾತಿ-ಪಂಗಡದವರ ಸಾಮಾಜಿಕ ಸುರಕ್ಷೆಗಾಗಿ ಪ್ರತ್ಯೇಕ ನಿಧಿ, ಮೂಲಭೂತ ಸೌಲಭ್ಯಗಳಿಗೆ 1,03.50,000 ರೂ.ಮೀಸಲಿರಿಸಿದೆ.
ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಮತಾ ದಿವಾಕರ್ ಮುಂಗಡಪತ್ರ ಮಂಡಿಸಿದರು. ಸದಸ್ಯರು, ಗ್ರಾಮಪಂಚಾಯತಿ ಅಧ್ಯಕ್ಷರು, ಸಿಬ್ಬಂದಿಗಳು ಉಪಸ್ಥಿತರಿದ್ದರು.