ಮುಳ್ಳೇರಿಯ : ಅತೀ ಪುರಾತನವೂ ಇತಿಹಾಸ ಪ್ರಸಿದ್ಧವೂ ಆದ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ವರ್ಷಾವಧಿ ಉತ್ಸವವು ಆರಂಭಗೊಂಡಿದ್ದು ಫೆ. 2ರ ತನಕ ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ, ಶ್ರೀಬಲಿ, ನವಕಾಭಿಷೇಕ, ತುಲಾಭಾರ ಸೇವೆ, ವಿದುಷಿ ಶ್ರೀಮತಿ ಸಾವಿತ್ರಿ ಕೆ ಭಟ್ ದೊಡ್ಡಮಾಣಿ ಇವರ ಶಿಷ್ಯವೃಂದದವರಿಂದ ಶಾಸ್ತ್ರೀಯ ಸಂಗೀತ, ಮಾಸ್ಟರ್ ವೆಂಕಟ ಯಶಸ್ವಿ ಕಬೆಕ್ಕೋಡು ಇವರಿಂದ ಶಾಸ್ತ್ರೀಯ ಸಂಗೀತ, ಸುಬ್ರಹ್ಮಣ್ಯ ಕಬೆಕ್ಕೋಡು ಇವರಿಂದ ವಯಲಿನ್‍ವಾದನ, ಶ್ರೀಭೂತಬಲಿ, ನೃತ್ಯಗಾಥಾ' ವಿದುಷಿ ಕುಮಾರಿ ಅನಘಶ್ರೀ ಇವರಿಂದ ಏಕವ್ಯಕ್ತಿ ನಾಟ್ಯಪ್ರದರ್ಶನ, À ವಿದ್ಯಾಶ್ರೀ ಸಂಗೀತ ಸಭಾ ಮುಳ್ಳೇರಿಯ ಪ್ರಾಯೋಕತ್ವದಲ್ಲಿ ಕೋಳಿಕ್ಕಜೆ ಬಾಲಸುಬ್ರಹ್ಮಣ್ಯ ಭಟ್ ಮತ್ತು ಶಿಷ್ಯವೃಂದ ಹಾಗೂ ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಬೇಂದ್ರೋಡು ಗೋವಿಂದ ಭಟ್ ಮತ್ತು ಬಳಗದವರಿಂದ 'ಯಕ್ಷಗಾನ ಕೂಟ, ಗುರುವಾರ ಧಾರ್ಮಿಕಸಭೆಯಲ್ಲಿ ಧಾರ್ಮಿಕ ಉಪನ್ಯಾಸವನ್ನು ಪುತ್ತೂರು ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯರು ನೀಡಿದರು, ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ತಲೇಕ ವಹಿಸುವರು, ಕುಂಟಾರು ಶಾರದಾ ಸಂಗೀತ ಶಾಲೆಯ ದಾಮೋದರ ಸುಳ್ಯಪದವು ಮತ್ತು ಶಿಷ್ಯವೃಂದದವರಿಂದ ಗಾನ ವೈವಿಧ್ಯ ನಡೆಯಿತು,
ಶುಕ್ರವಾರದಂದು ಬೆಳಗ್ಗೆ ಶ್ರೀಬಲಿ, ವಿದ್ವಾನ್ ಎ. ಈಶ್ವರ ಭಟ್ ಕಾಂಚನ ಇವರ ಶಿಷ್ಯೆ ವಿದುಷಿ ವಾಣಿಪ್ರಸಾದ್ ಕಬೆಕ್ಕೋಡು ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ, ತುಲಾಭಾರ ಸೇವೆ, ಬಲಿವಾಡು ಕೂಟ, ಪ್ರಸಾದ, ಸಂತರ್ಪಣೆ, ನವೀನ ಕುಮಾರ್ ಮತ್ತು ಬಳಗ, ಭಕ್ತಿ ಭಜನ ಬಳಗ ಮವ್ವಾರು ಇವರಿಂದ 'ದೇವ ಸಂಕೀರ್ತನೆ', ಗಂಗಾಧರ ಮಾರಾರ್ ನೀಲೇಶ್ವರ ಮತ್ತು ಬಳಗದವರಿಂದ ತಾಯಂಬಕ, ಸಂಜೆ ಶಿವಗಿರಿ ಫ್ರೆಂಡ್ಸ್ ಆಟ್ರ್ಸ್ & ಸ್ಪೋಟ್ರ್ಸ್ ಕ್ಲಬ್, ಶಿವಗಿರಿ ನಗರ, ನಾರಂಪಾಡಿ ಇವರಿಂದ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ಪಾತ್ರೆ ಸಮರ್ಪಣೆ, ಹಾಗೂ ಹಿಂದೂ ಐಕ್ಯವೇದಿ ಪುಂಡೂರು-ಕರೋಡಿ ಇವರಿಂದ ಇವರಿಂದ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ಪಾತ್ರೆ ಸಮರ್ಪಣೆ, ರಾತ್ರಿ ಶ್ರೀಬಲಿ ಉತ್ಸವ, ವಸಂತಕಟ್ಟೆ ಪೂಜೆ, ಬೆಡಿಕಟ್ಟೆ ಪೂಜೆ, ಬೆಡಿಸೇವೆ, ದರ್ಶನಬಲಿ, ಶಯನ, ಕವಾಟಬಂಧನ ನಡೆಯಿತು..
ಫೆ. 2 ಶನಿವಾರ ಬೆಳಗ್ಗೆ ಗಂಟೆÉ 7.30 ಜಲದ್ರೋಣೀ ಪೂಜೆ, ಯಾತ್ರಾಹೋಮ, ಕವಾಟೋದ್ಘಾಟನೆÀ, ಕಣಿದರ್ಶನ, ಕಲಶಾಭಿಷೇಕ,ಬೆಳಗ್ಗಿನ ಪೂಜೆ. 8ರಿಂದ ಏತಡ್ಕ ಶ್ರೀ ವಿಶ್ವಪ್ರಿಯ ಮಹಿಳಾ ಭಜನ ಮಂಡಳಿ ಇವರಿಂದ ಭಜನೆ, 9.30ಕ್ಕೆ ಸುಗುಣಾ ಬಿ. ತಂತ್ರಿ., 'ತಾಂತ್ರಿಕ ಸದನ' ಉಬ್ರಂಗಳ ಇವರಿಂದ ಶಾಸ್ತ್ರೀಯ ಸಂಗೀತ, ರೇಖಾ ಶ್ರೀನಿವಾಸ ಮುನಿಯೂರು ಇವರಿಂದ ಶಾಸ್ತ್ರೀಯ ಸಂಗೀತ, 11ರಿಂದ ತುಲಾಭಾರ ಸೇವೆ, 11ಕ್ಕೆ ಬದಿಯಡ್ಕ ವಿದ್ಯಾಪಲ್ಲವಿ ಸಂಗೀತ ಶಾಲೆ ನಟರಾಜ ಶರ್ಮ ಬಳ್ಳಪದವು ಇವರ ಶಿಷ್ಯವೃಂದದವರಿಂದ ಸುಗಮ ಸಂಗೀತ, ಮಧ್ಯಾಹ್ನ ಮಹಾಪೂಜೆ, ಪ್ರಸಾದ, ಅನ್ನದಾನ(ಸೇವೆ: ಮುತ್ತಪ್ಪ ರೈ ನಾರಂಪಾಡಿ ಗುತ್ತು), ಅಪರಾಹ್ನ 2.30 ಶ್ರೀಬಲಿ ಉತ್ಸವ, ವಸಂತಕಟ್ಟೆ ಪೂಜೆ, ಅವಭೃಥ ಸ್ನಾನ, ರಾಜಾಂಗಣ ಪ್ರಸಾದ, ದರ್ಶನಬಲಿ, ಧ್ವಜಾವರೋಹಣ, ಪೂಜೆ, ಮಂತ್ರಾಕ್ಷತೆ, ದೈವಗಳ ತಂಬಿಲವು ನಡೆಯಲಿದೆ.