ಕಯ್ಯಾರು ಡೋನ್ ಬೋಸ್ಕೊ ಶಾಲೆಯ ಪ್ರಿಪ್ರೈಮರಿ ತರಗತಿಗಳ ವಾರ್ಷಿಕ
0
ಫೆಬ್ರವರಿ 06, 2019
ಉಪ್ಪಳ: ಕಯ್ಯಾರು ಡೋನ್ ಬೋಸ್ಕೊ ಶಾಲೆಯ ಪ್ರಿಪ್ರೈಮರಿ ತರಗತಿಗಳ ವಾರ್ಷಿಕ, ಹೆತ್ತವರ ಮತ್ತು ಮಕ್ಕಳ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಂತಿ ಲೋಬೊ ಉದ್ಘಾಟಿಸಿದರು. ಶಾಲಾ ಸಂಚಾಲಕ ಫಾದರ್ ವಿಕ್ಟರ್ ಡಿ'ಸೋಜ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿ'ಸೋಜ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸ್ಟೀಫನ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಮಕ್ಕಳ ಹೆತ್ತವರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತ ಮತ್ತು ಕಲಿಕೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
ಸ್ಪರ್ಧೆಗಳನ್ನು ಶಿಕ್ಷಕಿಯರಾದ ಸರೋಜಿನಿ, ಎವ್ಲಿನ್ ಡಿ'ಸೋಜ ಮತ್ತು ಸಿಸ್ಟರ್ ರೀನಾ ನಡೆಸಿಕೊಟ್ಟರು.
ಮುಖ್ಯೋಪಾಧ್ಯಾಯ ಲೂವಿಸ್ ಮೊಂತೇರೋ ಸ್ವಾಗತಿಸಿ, ಎವ್ಲಿನ್ ಡಿ'ಸೋಜ ವಂದಿಸಿದರು.ಶಿಕ್ಷಕಿ ಸರೋಜಿನಿ ಕಾರ್ಯಕ್ರಮ ನಿರ್ವಹಿಸಿದರು.