ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯಿತಿಯ ಮುಳ್ಳೇರಿಯದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಿಸಿದ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಇತ್ತೀಚೆಗೆ ನಿರ್ವಹಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀಲೇಖ ವರದಿ ಮಂಡಿಸಿದರು. ಸ್ಥಳವನ್ನು ಕೊಡುಗೆಯಾಗಿ ನೀಡಿದ ರಮಾ ರಾವ್ ಅವರನ್ನು ಗೌರವಿಸಲಾಯಿತು. ಪಂಚಾಯಿತಿ ಉಪಾಧ್ಯಕ್ಷ ವಿನೋದನ್ ನಂಬ್ಯಾರ್, ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್, ಬ್ಲಾಕ್ ಪಂಚಾಯಿತಿ ಸದಸ್ಯ ವಾರಿಜಾಕ್ಷನ್, ಪಂಚಾಯಿತಿ ಸದಸ್ಯರಾದ ಗೋಪಾಲಕೃಷ್ಣ, ಸ್ವಪ್ನ, ಬಾಲಕೃಷ್ಣ, ಶ್ರೀವಿದ್ಯಾ, ತಸ್ನಿ ಹಮೀದ್, ಸ್ಮಿತಾ, ಸಿಡಿಪಿಒ ಶೋಭನಾ, ವ್ಯಾಪಾರಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ, ರಾಜಕೀಯ ನೇತಾರರಾದ ವಸಂತ, ಶಂಕರನ್, ಸನೋಜ್, ವಿಜಯನ್ ನಾಯರ್, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಕಾರಡ್ಕ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ ಸ್ವಾಗತಿಸಿ, ಐಸಿಡಿಎಸ್ ಮೇಲ್ವಿಚಾರಕಿ ನಸೀರ.ಪಿ.ಎ ವಂದಿಸಿದರು.