HEALTH TIPS

ಬರ್ಮಾ ಅಡಿಕೆ: ಕೃಷಿಕರಿಗೆ ಜಾಗೃತರಾಗುವಂತೆ ಕ್ಯಾಂಪ್ಕೊ ಮನವಿ

 
           ಮಂಗಳೂರು: ದೇಶದೊಳಕ್ಕೆ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದು ಈಗ ಮತ್ತೆ ಸುದ್ದಿಯಾಗುತ್ತಿದೆ. ವಿಶೇಷವಾಗಿ, ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವ ಬರ್ಮಾದೇಶದ್ದೆಂದು ಹೇಳಲಾಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆ ಕಾನೂನು ಬಾಹಿರವಾಗಿ ಆಮದಾಗುತ್ತಿದ್ದು, ಸ್ಥಳೀಯ ವ್ಯಾಪಾರಿಗಳೂ, ಕೆಲವು ಕೃಷಿಕರೂ ಇದರಲ್ಲಿ ಶಾಮೀಲಾಗಿರುವುದು ವರದಿಯಾಗಿದೆ. ಉತ್ತಮಗುಣಮಟ್ಟದ ದೇಶೀಯ ಅಡಿಕೆಯೊಂದಿಗೆ, ಈ ಕಳಪೆ ಗುಣಮಟ್ಟದ ವಿದೇಶೀ ಅಡಿಕೆ ಕಲಬೆರೆಕೆಯಾಗಿ ಅಡಿಕೆ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಿ ಬೆಲೆಯ ಕುಸಿತಕ್ಕೆ ನೇರ ಕಾರಣವಾಗುತ್ತಿರುವುದು ತಿಳಿದು ಬಂದಿದೆ.
          ಈ ಅಕ್ರಮ ಆಮದು, ತೆರಿಗೆ ತಪ್ಪಿಸುವ ವ್ಯವಹಾರವಾಗಿದ್ದು ಒಂದೆಂಡೆ ಸರಕಾರದ ಬೊಕ್ಕಸಕ್ಕೆ ನಷ್ಟವಾದರೆ, ಇನ್ನೊಂದೆಡೆ ಅಕ್ರಮ ಪೂರೈಕೆಯಿಂದ ಮಾರುಕಟ್ಟೆಯ ಅಸ್ಥಿರತೆಗೆ ಕಾರಣವಾಗುತ್ತಿದೆ.
       ಕೃಷಿಕರಿಗೆ ಆಪತ್ತು ಉಂಟುಮಾಡುವ ಈ ಬಗೆಯ ಅಕ್ರಮವಾದ ಅಡಿಕೆ ವ್ಯವಹಾರದಲ್ಲಿ ಯಾರೊಬ್ಬರೂ ತೊಡಗಬಾರದೆಂಬುದು ಕ್ಯಾಂಪ್ಕೊದ ಆಗ್ರಹವಾಗಿದೆ. ಅಡಿಕೆ ಉದ್ಯಮದಲ್ಲಿ ತೊಡಗಿರುವವರೆಲ್ಲರೂ ಈ ವಿಚಾರದಲ್ಲಿ ಜಾಗೃತರಾಗಿರಬೇಕೆಂದು ಕ್ಯಾಂಪ್ಕೊ ವಿನಂತಿಸುತ್ತದೆ. ಈ ಅಕ್ರಮವೆಸಗುವವರ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ತಿಳಿಸಿ ಸೂಕ್ತ ಕ್ರಮಕೈಗೊಳ್ಳುವಂತೇ ಮಾಡಿ ಕೃಷಿಕರ ರಕ್ಷಣೆಗೆ ಕ್ಯಾಂಪ್ಕೊ ಬದ್ಧವಾಗಿರುವುದೆಂದು ಅಧ್ಯಕ್ಷ ಎಸ್.ಆರ್,ಸತೀಶ್ಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries