HEALTH TIPS

ರಾಜ್ಯ ಸರಕಾರದ ಒಂದು ಸಾವಿರ ದಿನಪೂರ್ಣ: ಮಂಜೇಶ್ವರ ವಿಧಾನಸಭೆ ಕ್ಷೇತ್ರ ಮಟ್ಟದ ಸಂಘಟಕ ಸಮಿತಿ ಸಭೆ

ಮಂಜೇಶ್ವರ: ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಆಚರಣೆ ಸಂಬಂಧ ಜನಪರ ಉತ್ಸವ ನಡೆಸುವ ಅಂಗವಾಗಿ ಮಂಜೇಶ್ವರ ವಿಧಾನಸಭೆ ಕ್ಷೇತ್ರ ಮಟ್ಟದ ಸಂಘಟಕ ಸಮಿತಿ ರಚನೆ ಸಭೆ ಸೋಮವಾರ ಜರುಗಿತು. ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ನಡೆದ ಸಮಾರಂಭದಲ್ಲಿ ವೈಭವದಿಂದ ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಗಿದೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಅಜ್ಜ ಮಂಗಳೂರಿನಲ್ಲಿ ನಡೆಸಿದ ಸಹಪಂಕ್ತಿ ಭೋಜನ ಆಂದೋಲನದ 150ನೇ ವರ್ಷಾಚರಣೆಯನ್ನೂ ಈ ಕಾರ್ಯಕ್ರಮದ ಜೊತೆಗೆ ನಡೆಸಲು ತೀರ್ಮಾನಿಸಲಾಗಿದೆ. ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ ವಿವಿಧ ಸ್ಥಳೀಯಾಡಳಿತೆ ಸಂಸ್ಥೆಗಳ, ಸರಕಾರಿಇಲಾಖೆಗಳ,ಜನಪ್ರತಿನಿಧಿಗಳ, ರಾಜಕೀಯಪಕ್ಷಗಳ ಪ್ರತಿನಿಧಿಗಳ, ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಕ್ರಮನಡೆಸಲಾಗುವುದು ಎಂದು ಸಭೆ ತಿಳಿಸಿದೆ. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಮತ್ತು ಬ್ಲಾಕ್ ಪಂಚಾಯತಿ ಸದಸ್ಯ ಕೆ.ಆರ್.ಜಯಾನಂದ ನೇತೃತ್ವ ವಹಿಸಿದ್ದರು. ಪೈವಳಿಕೆ ಗ್ರಾಮಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಸಹಾಯಕ ಜಿಲ್ಲಾಧಿಕಾರಿ ಜಯಲಕ್ಷ್ಮಿ ತಹಸೀಲ್ದಾರ್ ಜೋನ್ ವರ್ಗೀಸ್, ವರ್ಕಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್, ಮಂಗಲ್ಪಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಸಾಹುಲ್ ಹಮೀದ್ ಬಂದ್ಯೋಡು, ಉಪಾಧ್ಯಕ್ಷೆ ಜಮೀಲಾ ಸಿದ್ದೀಕ್, ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ಪಿ.ವಿಜಯಕುಮಾರ್, ಜನಪ್ರತಿನಿಧಿಗಳು, ವಿವಿಧ ಇಲಾಖೆ ಸಿಬ್ಬಂದಿ, ರಾಜಕೀಯ ಪಕ್ಷಗಳಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು. 8ರಂದು ಸಭೆ: ಕಾರ್ಯಕ್ರಮ ರೂಪುರೇಷೆ ಸಂಬಂಧ ಸಮಘಟಕ ಸಮಿತಿಯ ಸಮಗ್ರ ಸಭೆ ಫೆ.8ರಂದು ಬೆಳಿಗ್ಗೆ 10.30ಕ್ಕೆ ತಾಲೂಕು ಕಚೇರಿಯಲ್ಲಿ ನಡೆಯಲಿದೆ ಎಂದು ತಹಸೀಲ್ದಾರ್ ಜೋನ್ ವರ್ಗೀಸ್ ತಿಳಿಸಿದರು. ಸಂಘಟನಾ ಸಮಿತಿ ಪದಾಧಿಕಾರಿಗಳು: ಅಧ್ಯಕ್ಷ-ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಉಪಾಧ್ಯಕ್ಷರು- ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಮತ್ತು ವಿಧಾನಸಭೆ ಕ್ಷೇತ್ರ ಮಟ್ಟದ ಗ್ರಾಮಪಂಚಾಯತಿ ಅಧ್ಯಕ್ಷರುಗಳು, ಸಂಚಾಲಕ-ತಹಸೀಲ್ದಾರ್ ಜೋನ್ ವರ್ಗೀಸ್, ಜತೆ ಸಂಚಾಲಕ- ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ಪಿ.ವಿಜಯಕುಮಾರ್. ವಿವಿಧ ಉಪಸಮಿತಿಗಳ ರಚನೆಯೂ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries