ಎಚ್1 ಎನ್1: 131 ಮಂದಿ ಗುಣಮುಖ
0
ಮಾರ್ಚ್ 02, 2019
ಕಾಸರಗೋಡು: ಪೆರಿಯ ನವೋದಯ ಶಾಲೆಯಲ್ಲಿ ಎಚ್1 ಎನ್1 ರೋಗ ವರದಿಯಾಗಿರುವ ಹಿನ್ನೆಲೆಯಲ್ಲಿಆರೋಗ್ಯ ಇಲಾಖೆ ನಡೆಸಿದ ಚುರುಕು ಪ್ರತಿರೋಧ ಚಟುವಟಿಕೆಗಳ ಪರಿಣಾಮ ಸಕಾರಾತ್ಮಕವಾಗಿದೆ.
ಏಕೀಕರಿಸಿದ ಚಿಕಿತ್ಸೆ, ರೋಗ ನಿರೀಕ್ಷಣೆ, ಪ್ರತಿರೋಧ ಚಟುವಟಿಕೆಗಳು ಇತ್ಯಾದಿಗಳ ಮೂಲಕ ಇತರ ಮಕ್ಕಲಿಗೆ ಕಯಿಲೆ ಹರಡದಂತೆ ತಡೆಯಲು ಸಾಧ್ಯವಾಗಿದೆ. ರೋಗಲಕ್ಷಣಗಳು ಪತ್ತೆಯಾದ 137 ಮಕ್ಕಳಲ್ಲಿ 131 ಮಂದಿ ಪೂರ್ಣರೂಪದಲ್ಲಿ ಗುಣಮುಖರಾಗಿದ್ದಾರೆ. ಮೂವರು ವಿದ್ಯಾಲಯದಲ್ಲಿ ಮತ್ತು ಮೂವರು ತಮ್ಮ ನಿವಾಸಗಳಲ್ಲಿ ಶುಶ್ರೂಷೆಯಲ್ಲಿದ್ದು, ಗುಣಮುಖರಾಗುತ್ತಿದ್ದಾರೆ. ಡಾ.ಧನೇಷ್ ಅವರ ನೇತೃತ್ವದಲ್ಲಿ ಪರಿಣತರ ತಂಡ ಈಗಲೂ ಪ್ರದೇಶದಲ್ಲಿ ತಂಗಿದೆ. ಸ್ಥಿತಿಗತಿಗಳು ನಿಯಂತ್ರಣದಲ್ಲಿವೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್ ತಿಳಿಸಿದರು. ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ.ಮನೋಜ್ ಎ.ಟಿ. ಅವರ ನೇತೃತ್ವದಲ್ಲಿ ಪ್ರತಿದಿನ ಶಾಲೆಗೆ ಭೇಟಿ, ಸ್ಥಿತಿಗತಿಗಳ ಅವಲೋಕನ ಸಹಿತ ಕ್ರಮಗಳು ನಡೆಯುತ್ತಿವೆ.