10ರಂದು ಶ್ರೀಧರ್ ಯೇತಡ್ಕ ಅವರ ಕಥಾಸಂಕಲನ ಬಿಡುಗಡೆ ನೂತನ ಟ್ರಸ್ಟ್ ಉದ್ಘಾಟನೆ
0
ಮಾರ್ಚ್ 05, 2019
ಬದಿಯಡ್ಕ: ಯುವ ಸಾಹಿತಿ, ಪತ್ರಕರ್ತ ಬಿ.ಎಸ್ ಯೇತಡ್ಕ ಚೊಚ್ಚಲ ಕಥಾ ಸಂಕಲನ `ತಿರುವು' ಕೃತಿಯ ಬಿಡುಗಡೆ ಮತ್ತು ಸಾಮಾಜಿಕ ಸೇವಾ ಸಂಘಟನೆಯಾದ ಸ್ನೇಹಹಸ್ತ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಬದಿಯಡ್ಕ ರಾಮಲೀಲಾ ಯೋಗ ಶಿಕ್ಷಣ ಕೇಂದ್ರ ಸಭಾಂಗಣದಲ್ಲಿ ಮಾ. 10ರಂದು ಅಪರಾಹ್ನ 2.30ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕ, ಸಾಮಾಜಿಕ ಮುಂದಾಳು ಬಾಲಕೃಷ್ಣ ವೋರ್ಕೋಡ್ಲು ಅಧ್ಯಕ್ಷತೆ ವಹಿಸಲಿದ್ದಾರೆ. ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಆಡಳಿತ ಟ್ರಸ್ಟಿ ಕೆ.ಪಿ ಮಾಲಿಂಗು ನಾಯರ್ ದೀಪಬೆಳಗಿಸಿ ಉದ್ಘಾಟಿಸುವರು.
ಖ್ಯಾತ ಚಿಂತಕ, ಸಮಾಜಸೇವಕ ಬೆಂಗಳೂರಿನ ಸಿಲಿಕಾನ್ ಎಂಜಿನಿಯರಿಂಗ್ ಕಾಲೇಜಿನ ಸ್ಥಾಪಕ ಡಾ. ಎಚ್.ಎನ್. ಚಂದ್ರಶೇಖರ್ ಇವರು ಕೃತಿ ಬಿಡುಗಡೆಗೊಳಿಸುವರು. ಹಿರಿಯ ಪತ್ರಕರ್ತ, ಲೇಖಕ ದುರ್ಗಾಕುಮಾರ್ ನಾಯರ್‍ಕೆರೆ ಸುಳ್ಯ, ಕೃತಿ ಪರಿಚಯ ನಡೆಸುವರು.
ದ.ಕ. ಜಿಪಂ ಉಪಾಧ್ಯಕ್ಷೆ, ಖ್ಯಾತ ಲೇಖಕಿ. ಕಸ್ತೂರಿ ಪಂಜ, ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಗೌರವ ಅತಿಥಿಗಳಾಗಿ ಭಾಗವಹಿಸುವರು.
ಖ್ಯಾತ ಚಲನಚಿತ್ರ ನಿರ್ದೇಶಕ ಎ.ಎಂ.ಆರ್. ರಮೇಶ್ ಬೆಂಗಳೂರು, ಬಹುಭಾಷಾ ನಟ, ನಿರ್ದೇಶಕ ಕಾಸರಗೋಡು ಚಿನ್ನಾ, ಖ್ಯಾತ ಚಿಂತಕ, ಉದ್ಯಮಿ ಎಚ್.ಎಲ್. ಕೃಷ್ಣಪ್ಪ ಬೆಂಗಳೂರು, ಜಾನಪದ ಸಂಶೋಧಕ ಡಾ. ಸುಂದರ ಕೇನಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಯತೀಶ್ ಕುಮಾರ್ ರೈ, ಬಿ. ಶ್ರೀಧರ ಯೇತಡ್ಕ, ಕೆ.ಗಂಗಾಧರ್ ಯಾದವ್, ಹರೀಶ್ ಗುತ್ತುಹಿತ್ತಿಲು, ಶಶಿಧರ ತೆಕ್ಕೆಮೂಲೆ, ಕೃಷ್ಣ ಯಾದವ್, ಸರೋಜನಿ ಬಿ.ಎಸ್. ಮತ್ತಿತರರು ಉಪಸ್ಥಿತರಿರುವರು.