100 ವಿಧವೆಯರಿಗೆ ಹೊಲಿಗೆ ಯಂತ್ರ ಮತ್ತು ಸಂಬಂಧ ಸಲಕರಣೆಗಳ ವಿತರಣೆ
0
ಮಾರ್ಚ್ 03, 2019
ಕಾಸರಗೋಡು: ರಾಜ್ಯದಲ್ಲೇ ಪ್ರಥಮ ಬಾರಿಗೆ ಕಾಸರಗೋಡು ಜಿಲ್ಲೆಯಲ್ಲಿ 100 ಮಂದಿ ವಿಧವೆಯರ ಸ್ವಾವಲಂಬಿ ಬದುಕಿಗೆ ಹೊಲಿಗೆ ಯಂತ್ರ ಮತ್ತು ತತ್ಸಂಬ ಸಾಮಾಗ್ರಿಗಳ ವಿತರಣೆ ನಡೆಯಿತು.
ಕೇರಳ ರಾಜ್ಯ ಹಿಂದುಳಿದ ವಿಭಾಗ ಅಭಿವೃದ್ಧಿ ನಿಗಮ, ರಾಷ್ಟ್ರೀಯ ಅಲ್ಪಸಂಖ್ಯಾತ ಅಭಿವೃದ್ಧಿ ಹಣಕಾಸು ನಿಗಮ ವತಿಯಿಂದ ಸಾಮಾಜಿಕ ಹೊಣೆ ಯೋಜನೆ (ಸಿ.ಎಸ್.ಆರ್) ಪ್ರಕಾರ ವಿಧವೆಯರಿಗೆ ಬದುಕುವ ಮಾರ್ಗ ಯೋಜನೆಯಲ್ಲಿ ಅಳವಡಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ.
ನೀಲೇಶ್ವರ ನಗರಸಭೆ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಆಯ್ದ 100 ಮಂದಿಗೆ ಈ ಸಲಕರಣೆಗಳ ವಿತರಣೆ ಮತ್ತು ಹೊಲಿಗೆ ತರಬೇತಿ ಪೂರ್ತಿಗೊಳಿಸಿರುವ ಅರ್ಹತಾಪತ್ರ ವಿತರಣೆ ಸಮಾರಂಭ ನಡೆಯಿತು.
ನೀಲೇಶ್ವರ ಬ್ಲಾಕ್ ಪಂಚಾಯತ್ ಕಚೇರಿ ಆವರಣದಲ್ಲಿ ಶನಿವಾರ ನಡೆದ ಸಮಾರಂಭವನ್ನು ಸಂಸದ ಪಿ.ಕರುಣಾಕರನ್ ಉದ್ಘಾಟಿಸಿದರು. ಟಿ.ಕೆ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ವಿ.ಪಿ.ಜಾನಕಿ ಪ್ರಧಾನ ಭಾಷಣ ಮಾಡಿದರು. ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೌಝೀಯಾ ವಿ.ಪಿ., ಟಿ.ವಿ.ಶ್ರೀಧರನ್ ಮಾಸ್ಟರ್, ಎಂ.ಟಿ.ಅಬ್ದುಲ್ ಜಬ್ಬಾರ್, ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಕೆ.ನಾರಾಯಣನ್ ಮಾಸ್ಟರ್, ಪಡನ್ನ ಪಂಚಾಯತ್ ಉಪಾಧ್ಯಕ್ಷೆ ಝುಬೈದಾ, ಕೆ.ಎಸ್.ಬಿ.ಡಿ.ಸಿ. ಪ್ರಧಾನ ಪ್ರಬಂಧಕ(ಪೆÇ್ರಜೆಕ್ಟ್)ಬಿ.ಶರ್ಫುದ್ದೀನ್ ಮೊದಲಾದವರು ಮಾತನಾಡಿದರು.
ಜಾಸಿ ಜೋಸ್ ತರಗತಿ ನಡೆಸಿದರು. ಹಿಂದುಳಿದ ವಿಭಾಗ ಅಭಿವೃದ್ಧಿ ನಿಗಮ ಆಡಳಿತ ನಿರ್ದೇಶಕ ಕೆ.ಟಿ.ಬಾಲಭಾಸ್ಕರನ್ ಸ್ವಾಗತಿಸಿದರು. ನೀಲೇಶ್ವರ ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಸಜೀವನ್ ವಂದಿಸಿದರು.