ಮಾ.12 ರಂದು ರಾಹುಲ್ ಗಾಂಧಿ ಕಾಸರಗೋಡಿಗೆ
0
ಮಾರ್ಚ್ 03, 2019
ಕಾಸರಗೋಡು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಾ.12 ರಂದು ಕಾಸರಗೋಡಿಗೆ ಆಗಮಿಸಲಿದ್ದಾರೆ.
ಪೆರಿಯಾ ಕಲ್ಯೋಟ್‍ನಲ್ಲಿ ಹತ್ಯೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‍ಲಾಲ್ (24) ಮತ್ತು ಕೃಪೇಶ್(19) ಮನೆಗಳಿಗೆ ಭೇಟಿ ನೀಡಿ ಕುಟುಂಬದವರನ್ನು ಸಂತೈಸಲಿದ್ದಾರೆ. ದೆಹಲಿಯಿಂದ ಮಾ.12 ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವರು. ಬೆಳಿಗ್ಗೆ 11 ಕ್ಕೆ ಕಲ್ಯೋಟ್‍ಗೆ ತಲುಪಲಿದ್ದಾರೆ.
ಪುಲ್ವಾಮ ಉಗ್ರರ ದಾಳಿಯಲ್ಲಿ ವೀರ ಮೃತ್ಯು ಹೊಂದಿದ ವಯನಾಡಿನ ಸಿ.ಆರ್.ಪಿ.ಎಫ್. ಯೋಧ ವಿ.ವಿ.ವಸಂತ ಕುಮಾರ್ ಅವರ ಮನೆಗೂ ಭೇಟಿ ನೀಡಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ ಕಲ್ಲಿಕೋಟೆಯಲ್ಲಿ ನಡೆಯುವ ಕಾಂಗ್ರೆಸ್ ಬಹಿರಂಗ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.