ಐಐಟಿಯಲ್ಲಿ ವ್ಯಾಸಂಗ ಮಾಡದಿದ್ದರು ಗೂಗಲ್ ಲಂಡನ್ ಕಚೇರಿಯಲ್ಲಿ 1.2 ಕೋಟಿ ಉದ್ಯೋಗ ಪಡೆದ ಯುವಕ!
0
ಮಾರ್ಚ್ 30, 2019
ನವದೆಹಲಿ: 21 ವರ್ಷದ ಅಬ್ದುಲ್ಲಾ ಖಾನ್ ಐಐಟಿ ಮುಂಬೈನಲ್ಲಿ ವ್ಯಾಸಂಗ ಮಾಡದಿದ್ದರೂ ಗೂಗಲ್ ಲಂಡನ್ ಕಚೇರಿಯಲ್ಲಿ 1.2 ಕೋಟಿ ಪ್ಯಾಕೆಜ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಶ್ರೀ ಎಲ್ ಆರ್ ತಿವಾರಿ ಇಂಜಿನಿಯರಿಂಗ್ ಕಾಲೇಜುನಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಡೆಸಿದ ಗೂಗಲ್, ಅಬ್ದುಲ್ಲಾ ಖಾನ್ ಎಂಬವರನ್ನು ಆಯ್ಕೆ ಮಾಡಿದೆ. ವಿವಿಧ ರೀತಿಯಲ್ಲಿ ಸಂದರ್ಶನ ನಡೆಸಿದ ಗೂಗಲ್ ಲಂಡನ್ ನ ಗೂಗಲ್ ಕಚೇರಿಯಲ್ಲಿ ಫೈನಲ್ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಿದೆ.
ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿರುವ ಅಬ್ದುಲ್ಲಾ ಕಳೆದ ನವೆಂಬರ್ ನಲ್ಲಿ ಅಂತಿಮ ಆಯ್ಕೆ ಮಾಡಲಾಗಿತ್ತು. ಒಟ್ಟಿನಲ್ಲಿ ವರ್ಷಕ್ಕೆ ಶೇಖಡ 15ರಷ್ಟು ಬೌನಸ್ ಸೇರಿ 58.9 ಲಕ್ಷ ರುಪಾಯಿ ಸಂಬಳ ಪಡೆಯಲಿದ್ದಾರೆ.
ಈ ಹಿಂದೆ ಐಐಟಿಯಲ್ಲಿ ವ್ಯಾಸಂಗ ಮಾಡದ ವಿದ್ಯಾರ್ಥಿಗೆ 4 ಲಕ್ಷ ರುಪಾಯಿ ವಾರ್ಷಿಕ ಸಂಬಳಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ 59 ಲಕ್ಷಕ್ಕೆ ವಿದ್ಯಾರ್ಥಿಯೊಬ್ಬ ಆಯ್ಕೆಯಾಗಿರುವುದು ವಿಶೇಷತೆಯಾಗಿದೆ.