ಪಾಕ್‍ನಿಂದ ಎಫ್-16 ಯುದ್ಧ ವಿಮಾನ ದುರ್ಬಳಕೆ: ಮಾಹಿತಿ ಕೇಳಿದ ಅಮೆರಿಕ
0
ಮಾರ್ಚ್ 02, 2019
ವಾಷಿಂಗ್ಟನ್: ಅಮೆರಿಕ ನಿರ್ಮಿತ ಎಫ್ - 16 ಯುದ್ಧ ವಿಮಾನವನ್ನು ಪಾಕಿಸ್ಥಾನ, ಭಾರತದ ವಿರುದ್ಧ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಅಮೆರಿಕ, ಪಾಕಿಸ್ತಾನಕ್ಕೆ ಸೂಚಿಸಿದೆ.
ಪಾಕಿಸ್ತಾನ, ಭಾರತದ ವಿರುದ್ಧ ಎಫ್-16 ಯುದ್ಧ ವಿಮಾನ ಬಳಸುವ ಮೂಲಕ ಮೂಲಕ ಎಂಡ್-ಯೂಸರ್ ಒಪ್ಪಂದ ಉಲ್ಲಂಘನೆ ಮಾಡಿದೆ. ಇದನ್ನು ಅಮೆರಿಕ ಗಂಭೀರವಾಗಿ ಪರಿಗಣಿಗಸಿದ್ದು, ಈ ಬಗ್ಗೆ ಪಾಕಿಸ್ಥಾನದಿಂದ ಹೆಚ್ಚಿನ ಮಾಹಿತಿ ಪಡೆದುಕೆuಟಿಜeಜಿiಟಿeಜಳ್ಳಲಾಗುವುದು ಎಂದು ಅಮೆರಿಕದ ರಕ್ಷಣಾ ಇಲಾಖೆ ತಿಳಿಸಿದೆ.
ಪಾಕಿಸ್ತಾನ ಎಫ್-16 ವಿಮಾನ ದುರ್ಬಳಕೆ ಮಾಡಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಪಾಕಿಸ್ತಾನಕ್ಕೆ ಕೇಳಿದ್ದೇವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಕೋನ್ ಫಾಕ್ನರ್ ಅವರು ಹೇಳಿದ್ದಾರೆ.
ಯುದ್ಧ ವಿಮಾನ ಪೂರೈಕೆದಾರನಾಗಿ ತಾನು ಪಾಕ್ ಜತೆಗೆ, ಅದರ ಬಳಕೆ ಕುರಿತಾದ ಮಾಹಿತಿ-ಬಹಿರಂಗ ಮಾಡದ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ, ಎಂಡ್ ಯೂಸರ್ ಒಪ್ಪಂದದ ಅಂಶಗಳನ್ನು ಬಹಿರಂಗಪಡಿಸಲಾರೆ. ಆದರೆ ಪಾಕಿಸ್ಥಾನವು ಒಪ್ಪಂದವನ್ನು ಮೇಲ್ನೋಟಕ್ಕೇ ಉಲ್ಲಂಘನೆ ಮಾಡಿರುವುದು ನಮಗೆ ವರದಿಗಳು ಮತ್ತು ಸಾಕ್ಷ್ಯಗಳಿಂದ ತಿಳಿದು ಬಂದಿದೆ ಎಂದಿದ್ದಾರೆ.
ಭಾರತದ ವಾಯುಗಡಿ ಉಲ್ಲಂಘಿಸಿದ್ದ ಪಾಕಿಸ್ತಾನ ಎಫ್ 16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿತ್ತು. ವಾಯುಪಡೆ ಅಧಿಕಾರಿಗಳು ಅದರ ಅವಶೇಷಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ್ದರು. ಆದರೆ ಪಾಕಿಸ್ತಾನ ಮಾತ್ರ ತಾನು ಪಾಕಿಸ್ಥಾನ ಮಾತ್ರ ತಾನು ಎಫ್ -16 ಯುದ್ಧ ವಿಮಾನವನ್ನು ಬಳಸಿಯೇ ಇಲ್ಲ ಮತ್ತು ತಮ್ಮ ಯಾವುದೇ ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ ಎಂದು ಹೇಳಿತ್ತು.