ಕೆಎಸ್‍ಟಿಎ ನೇತೃತ್ವದಲ್ಲಿ ಅಧ್ಯಾಪಕ ಬೀಳ್ಕೊಡುಗೆ ಏ.1 ರಂದು
0
ಮಾರ್ಚ್ 27, 2019
ಮಂಜೇಶ್ವರ: ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ ಮಂಜೇಶ್ವರ ಉಪಜಿಲ್ಲಾ ಮಟ್ಟದ ಅಧ್ಯಾಪಕರ ಬೀಳ್ಕೊಡುಗೆ ಸಮಾರಂಭ ಏ.1 ರಂದು ಸೋಮವಾರ ಬೆಳಿಗ್ಗೆ 10ಕ್ಕೆ ಹೊಸಂಗಡಿಯ ಕೆಎಸ್‍ಟಿಎ ಭವನದಲ್ಲಿ ನಡೆಯಲಿದೆ.
ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ ಪಿ.ರಘುದೇವನ್ ಮಾಸ್ತರ್ ಉದ್ಘಾಟಿಸುವರು. ಕೃಷ್ಣವೇಣಿ ಬಿ.ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಪ್ರಸ್ತುತ ವರ್ಷ ನಿವೃತ್ತರಾಗುತ್ತಿರುವ ಅಧ್ಯಾಪಕರನ್ನು ಜಿಲ್ಲಾ ಕಾರ್ಯದರ್ಶಿ ಎ.ದಿಲೀಪ್ ಕುಮಾರ್ ಸನ್ಮಾನಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಜೊತೆ ಕಾರ್ಯದರ್ಶಿ ಯು.ಶಾಮ ಭಟ್, ಕಾರ್ಯಕಾರಿ ಸದಸ್ಯ ಬಿ.ಮೋಹನ, ವಿ.ದಿನೇಶ, ಅಹಮ್ಮದ್ ಹುಸೈನ್ ಪಿ.ಕೆ, ಪ್ರೇಮರಾಜನ್ ಅಭಿನಂದನಾ ಭಾಷಣಗೈಯ್ಯುವರು. ಉಪಜಿಲ್ಲಾ ಎಲ್ಲಾ ಅಧ್ಯಾಪಕರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಉಪಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ಪಾವಳ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.