ಶಿಕ್ಷಕರು,ಪ್ರಾಧ್ಯಾಪಕರಿಗೆ ನ್ಯಾಯ ಕಲ್ಪಿಸಲು 200 ಪಾಯಿಂಟ್ ರೋಸ್ಟರ್ ಪದ್ಧತಿ ಜಾರಿ: ಜಾವಡೇಕರ್ ಭರವಸೆ
0
ಮಾರ್ಚ್ 06, 2019
ನವದೆಹಲಿ: ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದ್ದು, 200 ಪಾಯಿಂಟ್ ರೋಸ್ಟರ್ ಪದ್ಧತಿ ಜಾರಿಗೊಳಿಸಲಿದೆ ಎಂದು ಮಾನವ ಸಂಪನ್ಮೂಲಗಳ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ರಾಜಕೀಯ ಮುಖಂಡರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೋಸ್ಟರ್ ಪದ್ಧತಿ ಜಾರಿಗೆ ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಾಯಿಸಿದ್ದರು.
ಜೊತೆಗೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜಿನಲ್ಲಿ 200 ಪಾಯಿಂಟ್ ರೋಸ್ಟರ್ ಪದ್ಧತಿ ಜಾರಿಗೊಳಿಸಿದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಯುವಕರಿಗೆ ನ್ಯಾಯ ಸಿಗಲಿದೆ. ಹೀಗಾಗಿ ರೋಸ್ಟರ್ ಪದ್ಧತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುಂತೆ ಒತ್ತಾಯಿಸಿರುವ ಆದಿವಾಸಿಗಳು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಜಾವಡೇಕರ್, ವಿಶ್ವದ್ಯಾಲಯಗಳ ಸಿಬ್ಬಂದಿಗೆ ಖಂಡಿತಾ ನ್ಯಾಯ ಸಿಗಲಿದೆ ಪ್ರತಿಭಟನೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಮೀಸಲಾತಿಯು ಒಟ್ಟಾರೆ ವಿಶ್ವವಿದ್ಯಾಲಯಕ್ಕೆ ಸಿಗಲಿದೆಯೇ ಹೊರತು ವಿವಿಯ ಪ್ರತ್ಯೇಕ ಘಟಕಗಳಿಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.