ಸಾಯಿರಾಂ ಭಟ್ ರಿಂದ255ನೇ ಉಚಿತ ಮನೆ ಹಸ್ತಾಂತತರ
0
ಮಾರ್ಚ್ 05, 2019
ಬದಿಯಡ್ಕ: ಕೊಡುಗೈ ದಾನಿ, ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಉಚಿತವಾಗಿ ಕೊಡಮಾಡಿದ 255ನೇ ಮನೆಯ ಕೀಲಿಕೈ ಹಸ್ತಾಂತರ ಕಿಳಿಂಗಾರಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಿಳಿಂಗಾರಿನ ಚಂದ್ರಾವತಿ ಅವರಿಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್ ಕೀಲಿಕೈ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಎಜಿಸಿ ಬಶೀರ್ ಅವರು, ಭಯೋತ್ಪಾದನೆಯಮತಹ ಅಮಾನವೀಯತೆಯ ಮಧ್ಯೆ ಇಂದಿನ ಹೊಸ ತಲೆಮಾರಿಗೆ ಮಾನವೀಯತೆಯ ಪ್ರತಿಮೆಯಂತೆ ಕಾರ್ಯನಿರ್ವಹಿಸುತ್ತಿರುವ ಸಾಯಿರಾಂ ಭಟ್ ಅವರ ಬದುಕು ಸಾಧನೆಗಳು ಎಲ್ಲೆಡೆಗಳಿಗೆ ಮಾದರಿಯಾಗಿದೆ. ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಬಗ್ಗೆ ಭಟ್ ಅವರು ನಿರ್ವಹಿಸುತ್ತಿರುವ ಕಾಳಜಿ ಅಪೂರ್ವವಾಗಿದ್ದು, ಮಾನವ ಬದುಕಿನ ನಿಜವಾದ ಸಾರ್ಥಕತೆ ಅವರದು ಎಂದು ತಿಳಿಸಿದರು.
ಸಾಯಿರಾಂ ಗೋಪಾಲಕೃಷ್ಣ ಭಟ್, ಬದಿಯಡ್ಕ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ, ಸದಸ್ಯ ಬಾಲಕೃಷ್ಣ ಶೆಟ್ಟಿ, ನರೇಗಾ ಯೋಜನಾಧಿಕಾರಿ ದಿಲೀಪ್, ಬ್ಲಾಕ್ ಅಭಿವೃದ್ದಿ ಅಧಿಕಾರಿ ರಾಜೇಶ್, ಸಹಾಯಕ ಅಧಿಕಾರಿ ಉಮರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಮುಖಂಡರಾದ ಅಬ್ಬಾಸ್, ಸಂಜೀವ ರೈ ಸೀತಾಂಗೋಳಿ, ಆನಂದ ಕಾರ್ನವರ್, ಶೀಲಾ ಕೆ.ಭಟ್, ಶಾರದಾ ಮೊದಲಾದವರು ಉಪಸ್ಥಿತರಿದ್ದರು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸ್ವಾಗತಿಸಿ, ವಂದಿಸಿದರು.