HEALTH TIPS

ನಾಳೆ(ಮಾ.3) ಕನ್ನಡ ಜನಪ್ರತಿನಿಧಿಗಳ ಸಮಾಲೋಚನಾ ಸಭೆ

ಕುಂಬಳೆ: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡು-ಮಂಜೇಶ್ವರ ತಾಲೂಕು ವ್ಯಾಪ್ತಿಯ ಎಲ್ಲಾ ಸರಕಾರಿ, ಅರೆ ಸರಕಾರಿ, ಸ್ಥಳೀಯಾಡಳಿತೆ, ಸಹಕಾರಿ ಸಂಸ್ಥೆಗಳಲ್ಲಿ ರಾಜ್ಯದ ಮಲಯಾಳ ಭಾಷೆಯೊಂದಿಗೆ ದ್ವಿಭಾಷಾ ನೀತಿಯಂತೆ ಕನ್ನಡ ಭಾಷೆಯಲ್ಲಿಯೂ ವ್ಯವಹರಿಸುವ ರೀತಿಯಲ್ಲಿ ಸರಕಾರದ ಆದೇಶವಿದ್ದರೂ ಅದನ್ನು ಇಲ್ಲಿನ ಅಧಿಕಾರಿಗಳು ಪಾಲಿಸುತ್ತಿಲ್ಲವೆಂದು ಕನ್ನಡ ಹೋರಾಟ ಸಮಿತಿ ಆರೋಪಿಸಿದೆ. ಈ ಬಗ್ಗೆ ಅದೆಷ್ಟೋ ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರೂ ಮತ್ತೆ ಅದೇ ವರ್ತನೆಯನ್ನು ಮುಂದುವರಿಸುತ್ತಿದ್ದಾರೆ. ಕಾಸರಗೋಡು-ಮಂಜೇಶ್ವರ ತಾಲೂಕು ವ್ಯಾಪ್ತಿಯ ಅಚ್ಚ ಕನ್ನಡ ಪ್ರದೇಶಗಳಲ್ಲಿ ಎಲ್ಲಾ ಕಚೇರಿಗಳಲ್ಲಿ ಮಲಯಾಳ ಅಧಿಕಾರಿಗಳು ಸ್ಥಳೀಯ ಕನ್ನಡಿಗರನ್ನು ಬೆದರಿಸುವ ಮೂಲಕ ಮಲಯಾಳವನ್ನು ಹೇರುವ ವ್ಯವಸ್ಥಿತ ಸಂಚು ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಇಲ್ಲಿನ ಕನ್ನಡಿಗರು ಯಾವುದೇ ಪ್ರತಿಭಟನೆ ತೋರ್ಪಡಿಸದೆ ಮೌನಿಗಳಂತೆ ವರ್ತಿಸುವುದನ್ನು ನೋಡಿದರೆ ಬಹಳ ದು:ಖವೆನಿಸುತ್ತದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ದ್ವಿಭಾಷಾ ನೀತಿಯ ಪ್ರಕಾರ ಎಲ್ಲಾ ಮಾಹಿತಿಗಳನ್ನು ಕನ್ನಡದಲ್ಲಿಯೂ ನೀಡುವುದರೊಂದಿಗೆ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಬೇಕಾದ ತುರ್ತು ಕೆಲಸ ಆಗಬೇಕಿದೆ. ಎರಡು ತಾಲೂಕಿನ ಗ್ರಾಮ ಪಂಚಾಯತಿ, ಬ್ಲಾಕ್ ಪಂಚಾಯತಿ ಹಾಗು ಕಾಸರಗೋಡು ಜಿಲ್ಲಾ ಪಂಚಾಯತಿ, ನಗರಸಭೆಯ ವಿವಿಧ ರಾಜಕೀಯ ಪಕ್ಷಗಳ ಕನ್ನಡ ಜನಪ್ರತಿನಿಧಿಗಳು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಕನ್ನಡ ಜನಪ್ರತಿನಿಧಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಕನ್ನಡದಲ್ಲೂ ವ್ಯವಹರಿಸುವ ಹಾಗು ನಮ್ಮ ಹಕ್ಕುಗಳನ್ನು ಪಡೆಯಲು ಮುಂಚೂಣಿಯಲ್ಲಿ ನಿಲ್ಲಬೇಕಾಗಿದೆ. ಈ ಕುರಿತು ಮಾ.3 ರಂದು ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಕುಂಬಳೆ ಸಿಂಡಿಕೇಟ್ ಬ್ಯಾಂಕ್ ಮಹಡಿಯ ಮಾಧವ ಪೈ ಹಾಲ್‍ನಲ್ಲಿ ಕನ್ನಡ ಜನಪ್ರತಿನಿ„ಗಳ ಸಮಾಲೋಚನಾ ಸಭೆ ಕರೆಯಲಾಗಿದೆ. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಜನಪ್ರತಿನಿಧಿಗಳು ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿ ಕನ್ನಡ ಭಾಷೆ, ಸಂಸ್ಕøತಿಯನ್ನು ಉಳಿಸುವ ಕೆಲಸವನ್ನು ಮಾಡಬೇಕೆಂದು ಕನ್ನಡ ಹೋರಾಟ ಸಮಿತಿ ವಿನಂತಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries