ಮಾ.31 : ಮಿತ್ರ ಕಲಾವೃಂದದ ವಾರ್ಷಿಕೋತ್ಸವ- `ಮಿತ್ರ ರಂಗ ಮಂಟಪ' ಸಮರ್ಪಣೆ
0
ಮಾರ್ಚ್ 30, 2019
ಮಧೂರು: ಮಧೂರಿನ ಮಿತ್ರ ಕಲಾವೃಂದದ 43 ನೇ ವಾರ್ಷಿಕೋತ್ಸವ ಮತ್ತು ಮಧೂರು ಜಿ.ಜೆ.ಬಿ.ಎಸ್. ಶಾಲೆಗೆ `ಮಿತ್ರ ರಂಗ ಮಂಟಪ' ಸಮರ್ಪಣೆ ಕಾರ್ಯಕ್ರಮ ಮಾ.31 ರಂದು ಸಂಜೆ 5 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು `ಮಿತ್ರ ರಂಗ ಮಂಟಪ'ವನ್ನು ಉದ್ಘಾಟಿಸುವರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನವೀನ್ ಎಲ್ಲಂಗಳ ಬಹುಮಾನ ವಿತರಿಸುವರು. ವಿದ್ಯಾಧಿಕಾರಿ ನಂದಿಕೇಶನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಭಾರತದ ಜಲಸೈನ್ಯ ಪಡೆಯ ನಿವೃತ್ತ ಅಧಿಕಾರಿ ಹರೀಶ್ ಕಡಮಣ್ಣಾಯ, ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಬಿ. ಶುಭಹಾರೈಸುವರು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಪರಿಸರದ ಅಂಗನವಾಡಿ ಮಕ್ಕಳಿಂದ ಮತ್ತು ಸಂಘದ ಸದಸ್ಯೆಯರಿಂದ ನೃತ್ಯ ವೈವಿಧ್ಯ, `ಬಯ್ಯಮಲ್ಲಿಗೆ' ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಪೂರ್ಣ ಬೆಂಬಲ, ಸಹಕಾರ ನೀಡಬೇಕೆಂದು ಮಿತ್ರಕಲಾವೃಂದದ ಅಧ್ಯಕ್ಷ ಚಂದ್ರಗೋಪಾಲ ಎನ್, ಕಾರ್ಯದರ್ಶಿ ಮಹೇಶ್, ಕೋಶಾಧಿಕಾರಿ ಮಧುಕರ ಕೆ.ಗಟ್ಟಿ ಪತ್ರಿಕಾ ಪಕಟನೆಯಲ್ಲಿ ವಿನಂತಿಸಿದ್ದಾರೆ.