ಜಮ್ಮು ಕಾಶ್ಮೀರವನ್ನು ಸಂರಕ್ಷಿಸಲು 370 ನೇ ವಿಧಿಯನ್ನು ರದ್ದುಪಡಿಸಲು ಆಗ್ರಹ
0
ಮಾರ್ಚ್ 06, 2019
ಕಾಸರಗೋಡು: ಭಾರತದ 135 ಕೋಟಿ ಜನರ ತೆರಿಗೆ ಹಣದ ಅರ್ಧಾಂಶವೂ, ಜಮ್ಮು ಕಾಶ್ಮೀರದಲ್ಲಿರುವ ಉಗ್ರಗಾಮಿ ಸಂಘಟನೆಗಳಿಂದಾಗಿ ಖರ್ಚಾಗುತ್ತಿದೆ. ಆದುದರಿಂದ ಈ ಪ್ರದೇಶಗಳು ಭಾರತ ದೇಶಕ್ಕೆ ಯಾವಾಗಲೂ ತಲೆನೋವಾಗಿರುತ್ತದೆ. ಇದರಿಂದ ರಕ್ಷಿಸಲು ಜಮ್ಮು ಕಾಶ್ಮೀರವನ್ನು 3 ರಾಜ್ಯಗಳಾಗಿ ವಿಭಜಿಸಬೇಕು. ಜಮ್ಮು, ಕಾಶ್ಮೀರ, ಲಡಾಕ್ ಎಂಬೀ ಸಂಸ್ಥಾನಗಳಾಗಿ ವಿಭಜಿಸಿ ಕಾಶ್ಮೀರವನ್ನು ಪ್ರಶ್ನಾತೀತ ಪ್ರದೇಶ ಆಗಿ ಪರಿಗಣಿಸಿ ಅವರಿಗೆ ಸಿಗುವ ಎಲ್ಲಾ ಸಹಾಯಗಳನ್ನು ನಿಲ್ಲಿಸಬೇಕು. ಜಮ್ಮು, ಲಡಾಕ್ ಪ್ರಶ್ನೆಬಾ„ತ ಪ್ರದೇಶವಲ್ಲದ್ದರಿಂದ ನಾವು ಅನುಭವಿಸು ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಎಂದು ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘ ಸಭೆಯಲ್ಲಿ ಅಭಿಪ್ರಾಯಪಟ್ಟಿದೆ.
ಕಾಶ್ಮೀರದಿಂದ ಒಳಗೂ, ಹೊರಗೂ ಹೋಗಿ ಬರಲು ಪಾಸ್‍ಪೆÇೀರ್ಟ್, ಎನ್‍ಒಸಿ ವ್ಯವಸ್ಥೆಯನ್ನು ಏರ್ಪಡಿಸಬೇಕು. ಕಾಶ್ಮೀರದಲ್ಲಿ ಎಲ್ಲಾ ಸಾಮಾಗ್ರಿಗಳಿಗೂ 200 ಶೇ. ತೆರಿಗೆ ಏರ್ಪಡಿಸಬೇಕು ಮೊದಲಾದ ಕಾರ್ಯಗಳನ್ನು ಕಾರ್ಯಗತಗೊಳಿಸಿದರೆ ಕಾಶ್ಮೀರದ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾದೀತು ಎಂದಿದೆ.
ಕಾಶ್ಮೀರದ ಪುಲ್ಮಾಲ ಪ್ರದೇಶದಲ್ಲಿ ಭೀಕರ ಆಕ್ರಮಣಕ್ಕೆ ಬಲಿಯಾದ ವೀರ ಸೈನಿಕರಿಗೆ ಸಭೆಯಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಜಿಲ್ಲಾಧ್ಯಕ್ಷ ಎಂ.ಬಾಲಕೃಷ್ಣ ಅವರು ಅಧ್ಯಕ್ಷತೆ ವಹಿಸಿದರು. ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷ ಸಿ.ಎಚ್.ಸುರೇಶ್ ಸಭೆಯನ್ನು ಉದ್ಘಾಟಿಸಿ ವೀರ ಯೋಧರ ಹತ್ಯೆಯನ್ನು ಖಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿಶ್ವನಾಥ ರಾವ್ ಮಾತನಾಡಿ ದೇಶ ಕಾಯುವ ಯೋಧರನ್ನು ಉಗ್ರರು ಬಾಂಬು ಸ್ಪೋಟಿಸಿ ಸಾಯಿಸಿದ ಬಗ್ಗೆ ಖಂಡಿಸಿದರು ಮತ್ತು ಯಾವ ರೀತಿ ಬಾಂಬ್ ಸ್ಪೋಟಿಸಿ ನಮ್ಮ ಯೋಧರನ್ನು ಅಮಾನುಷವಾಗಿ ಕೊಲೆಗೈದಂತೆ ಅವರಿಗೂ ಅದೇ ಗತಿಯನ್ನು ನೀಡಬೇಕೆಂದರು.
ಕುಂಞÂಕಣ್ಣನ್, ಜನಾರ್ಧನ, ಎಂ.ಗೋಪಾಲ, ಜಿ.ದಿವಾಕರ, ಎಂ.ಬಾಲಕೃಷ್ಣ ಮಾತನಾಡಿದರು. ಜಿ.ದಿವಾಕರ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿಶ್ವನಾಥ ರಾವ್ ವಂದಿಸಿದರು.