ಎ.4ರಂದು ಹಸುರು ರ್ಯಾಲಿ
0
ಮಾರ್ಚ್ 30, 2019
ಕಾಸರಗೋಡು: ಪರಿಸರ ಸೌಹಾರ್ದ ಚುನಾವಣೆ ಎಂಬ ಸಂದೇಶದೊಂದಿಗೆ ಶುಚಿತ್ವ ಮಿಷನ್ ನೇತೃತ್ವದಲ್ಲಿ ಕಾಂಞಂಗಾಡ್‍ನಲ್ಲಿ ಎ.4 ರಂದು `ಹಸುರು ರ್ಯಾಲಿ' ನಡೆಸಲಿದೆ.
ಮಧ್ಯಾಹ್ನ 3 ಗಂಟೆಗೆ ಕಾಂಞಂಗಾಡ್ ತಾಲೂಕು ಕಚೇರಿ ಆವರಣದಲ್ಲಿ ಆರಭಗೊಳ್ಳುವ ರ್ಯಾಲಿ ಕೋಟಚ್ಚೇರಿಯಲ್ಲಿ ಸಮಾಪ್ತಿಗೊಳ್ಳಲಿದೆ. ಹಸುರು ಚುನಾವಣೆ ಲಾಂಛನಹೊತ್ತ ಬ್ಯಾನರ್, ಪ್ರಕೃತಿ ಸೌಹಾರ್ದ ಫಲಕಗಳು ಇತ್ಯಾದಿ ಹೊತ್ತ ಎನ್.ಎಸ್.ಎಸ್. ಸ್ವಯಂಸೇವಕರು, ಹಸುರು ಕ್ರೀಯಾ ಸೇನೆ ಸದಸ್ಯರು, ಶುಚಿತ್ವ ಮಿಷನ್ ಸಿಬ್ಬಂದಿ, ಕಾಂಞಂಗಾಡ್ ನಗರಸಭೆ ಆರೋಗ್ಯ ವಿಭಾಗ ಸಿಬ್ಬಂದಿ ಮೊದಲಾದವರು ರ್ಯಾಲಿಯಲ್ಲಿ ಭಾಗವಹಿಸುವರು.
ಪ್ಲಾಸ್ಟಿಕ್, ಪಿ.ವಿ.ಸಿ., ಡಿಸ್ಪೋಸಲ್ ವಸ್ತುಗಳು ಇತ್ಯಾದಿಗಳನ್ನು ಕೈಬಿಟ್ಟು, ಅವನ್ನು ಡ್ರಂಚಿಂಗ್ ಕೇಂದ್ರಗಳಿಗೆ ನೀಡಿ, ಪ್ರಕೃತಿ ಪೂರಕವಾದ ವಸ್ತುಗಳನ್ನು ಬಳಸಿ ಲೋಕಸಭೆ ಚುನಾವಣೆ ನಡೆಸುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ರ್ಯಾಲಿ ನಡೆಯಲಿದೆ.