ಪೊಯ್ಯತ್ತಬೈಲ್ ದರ್ಸ್ 50 ನೇ ಸಂಭ್ರಮ ಹಾಗೂ ತಾಜುಶರೀಹಃ ಅಲಿಕುಂಞÂ ಮುಸ್ಲಿಯಾರ್ ಗೆ ಸನ್ಮಾನ
0
ಮಾರ್ಚ್ 02, 2019
ಮಂಜೇಶ್ವರ: ಜಿಲ್ಲೆಯ ಉತ್ತರ ಭಾಗದಲ್ಲಿರುವ ಪೊಯ್ಯತ್ತಬೈಲಿನಲ್ಲಿ 1969 ರಲ್ಲಿ ಊರವರ ಸಹಾಯದೊಂದಿಗೆ ತಾಜುಶರೀಹಃ ಅಲಿಕುಂಞÂ ಮುಸ್ಲಿಯಾರ್ ರವರ ಮುತುವರ್ಜಿಯಲ್ಲಿ ಸ್ಥಾಪಿತವಾದ ಪೊಯ್ಯತ್ತಬೈಲ್ ದರ್ಸ್ ಇದೀಗ 50 ವರ್ಷಗಳನ್ನು ಪೂರೈಸಿದೆ.
ಈ ಸಮಾರಂಭದಂಗವಾಗಿ ಪೊಯ್ಯತ್ತಬೈಲ್ ದರ್ಸ್ ಗೋಲ್ಡನ್ ಜ್ಯುಬಿಲಿ ಸಮ್ಮೇಳನ ಹಾಗೂ ಕೇರಳ ಜಂಯಿಯ್ಯತುಲ್ ಉಲಮಾ ಉಪಾಧ್ಯಕ್ಷರು ಪೊಯ್ಯತ್ತಬೈಲ್ ಖಾಝಿಯೂ ಆಗಿರುವ ಶೈಖುನಾ ತಾಜುಶರೀಹ: ಅಲಿಕುಂಞÂ ಮುಸ್ಲಿಯಾರ್ ರವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.
ಇದಕ್ಕೂ ಮೊದಲು ಅಲಿ ಕುಂಞÂ ಉಸ್ತಾದ್ ರವರನ್ನು ವಾಹನ ಜಾಥಾದ ಮೂಲಕ ಶಿರಿಯಾದಿಂದ ಪೊಯ್ಯತಬೈಲ್ ತನಕ ಕರೆತರಲಾಯಿತು. ಬಳಿಕ ಮಣವಾಟಿ ಬೀಬಿ ದರ್ಗಾದಲ್ಲಿ ಪ್ರಾರ್ಥನೆ ನಡೆಯಿತು.
ಸಾದಾತ್ ತಂಙಳ್ ಗುರುವಾಯನಕೆರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬೇಕಲ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಿದರು. ಹಮಿದ್ ಕೋಯಮ್ಮ ತಂಙಳ್ ಮಾಟ್ಟೂಲ್ ರವರು ಅಲಿಕುಂಞÂ ಮುಸ್ಲಿಯಾರ್ ಅವರಿಗೆ ಸ್ಮರಣಿಕೆ ನೀಡಿ ಶಾಲು ಹೊದೆಸಿ ಸನ್ಮಾನಿಸಿದರು. ಜಮಾಅತ್ ಅಧ್ಯಕ್ಷ ಡಿ ಎಂ ಕೆ ಮೊಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕಸ ಸಚಿವ ಯು ಟಿ ಖಾದರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಇಬ್ರಾಹಿಂ ಬಾತಿಷ ತಂಙಳ್ ಆನೆಕಲ್ಲು, ಮುನೀರುಲ್ ಅಹ್ದಲ್ ತಂಙಳ್ ಮುಹಿಮ್ಮಾತ್, ಶಂಶುದ್ದೀನ್ ತಂಙಳ್ ಗಾಂಧಿನಗರ, ಬದ್ರುದ್ದೀನ್ ತಂಙಳ್ ಗಾಂಧಿ ನಗರ, ಅಬ್ದುಲ್ಲ ಮುಸ್ಲಿಯಾರ್ ಬೆಳ್ಳಿಪ್ಪಾಡಿ ಮೊದಲಾದರು ಶುಭಾಂಷಶೆಗೈದು ಮಾತನಾಡಿದರು.
ವೇದಿಕೆಯಲ್ಲಿ ಇಸ್ಲಾಂ ವಿದ್ಯಾಭ್ಯಾಸದಲ್ಲಿ ಪಾಂಡಿತ್ಯವನ್ನು ಪಡೆದವರಿಗೆ ಸನದುದಾನ ವನ್ನು ವಿತರಿಸಲಾಯಿತು. ಜೊತೆಗೆ ಪೊಯ್ಯತ್ತಬೈಲ್ ಮದ್ರಸ ಹಾಗೂ ಮಸೀದಿಗಾಗಿ ಸೇವೆಗೈದರನ್ನು ಗುರುತಿಸಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಮುಹ್ಯಿಸುನ್ನ ಪೊನ್ನಳ ಅಬ್ದುಲ್ ಖಾದರ್ ಮುಸ್ಲಿಯಾರ್ ಮುಖ್ಯ ಭಾಷಣ ನಡೆಸಿದರು. ಡಿ ಎಂ ಕೆ ಮೊಹಮ್ಮದ್ ಸ್ವಾಗತಿಸಿ ಅಬ್ದುಲ್ ಕರೀಂ ಡಿ ಕೆ ವಂದಿಸಿದರು.
ಫೆಬ್ರವರಿ 15 ರಂದು ಪೊಯ್ಯತ್ತಬೈಲ್ ಮಣವಾಟಿ ಬೀಬಿ ಯವರ ಉರೂಸ್ ಗೆ ಸಂಬಂಧಿಸಿ ಆರಂಭಗೊಂಡ ಧಾರ್ಮಿಕ ಭಾಷಣ ಇಂದು(ಮಾರ್ಚ್ 2 ರಂದು) ಮುಕ್ತಾಯಗೊಳ್ಳಲಿದೆ. ಭಾನುವಾರ ಮೌಲೂದ್ ಪಾರಾಯಣ ಹಾಗೂ ಅನ್ನದಾನ ನಡೆಯಲಿದೆ. ಮೌಲೂದ್ ಪಾರಾಯಣಕ್ಕೆ ಎ ಪಿ ಅಬೂಬಕ್ಕರ್ ಉಸ್ತಾದ್ ಕಾಂತಪುರಂ ನೇತೃತ್ವ ನೀಡುವರು.