ಕುಲಾಲರ ಸಾಲಿಯಾನ್ ಕುಟುಂಬದ ತರವಾಡು ಮನೆಯ ಬ್ರಹ್ಮಕಲಶೋತ್ಸವ ಮಾ.7 ಮತ್ತು 8ರಂದು
0
ಮಾರ್ಚ್ 06, 2019
ಉಪ್ಪಳ: ಚಿಪ್ಪಾರು ಗ್ರಾಮದ ಕೊಮ್ಮಂಗಳದ ಕೊರತಿಪಾದೆಯಲ್ಲಿ ನೂತನವಾಗಿ ನಿರ್ಮಿಸಿದ ಕುಲಾಲರ ಸಾಲಿಯಾನ್ ಕುಟುಂಬದ ತರವಾಡು ಮನೆಯ ಬ್ರಹ್ಮಕಲಶೋತ್ಸವ ಮಾರ್ಚ್ 7 ಮತ್ತು 8ರಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ನಡೆಯಲಿದೆ.
ಮಾ.7ರಂದು ಸಂಜೆ 5.30ಕ್ಕೆ ತಂತ್ರಿಗಳ ಆಗಮನ, ಸ್ವಾಗತ, 6ಕ್ಕೆ ಶಿಲ್ಪಿಗಳಿಂದ ಆಲಯ ನೂತನ ಪೀಠ ಪರಿಗ್ರಹ, ರಾತ್ರಿ 7.30ಕ್ಕೆ ಗಣಪತಿ ಪೂಜೆ, ಸಪ್ತಶುದ್ಧಿ, ಗೋಪೂಜೆ, ಪುಣ್ಯಾಹ ಋತ್ವಿಸ್ವರಣ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತುಬಲಿ, 8.30ಕ್ಕೆ ಬಿಂಬ ಪೀಠ ಶುದ್ಧಿ, ಅಧಿವಾಸ ನಡೆಯಲಿದೆ.
ಮಾ.8ರಂದು ಬೆಳಿಗ್ಗೆ 7.30ಕ್ಕೆ ಕಲಶ ಪ್ರತಿಷ್ಠೆ, ಗಣಪತಿ ಹೋಮ, ಸಾನಿಧ್ಯ ಪ್ರತಿಷ್ಠಾಂಗ ಹೋಮ, ಕಲಶ ಪೂಜೆ, 10.36ಕ್ಕೆ ಬ್ರಹ್ಮಶ್ರೀ ಬೆದ್ರಡ್ಕ ವಾಸ್ತುಶಿಲ್ಪಿ ವೇದಮೂರ್ತಿ ರಮೇಶ ಕಾರಂತರ ಮಾರ್ಗದರ್ಶನ ಮತ್ತು ವೇದಮೂರ್ತಿ ರಾಮಮೂರ್ತಿ ಭಟ್ ಕುರಿಯ ಅವರ ನೇತೃತ್ವದಲ್ಲಿ ತರವಾಡು ಗೃಹಪ್ರವೇಶ, 11.58ರ ಬಳಿಕ ದೈವದ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಪೂಜೆ ನಡೆಯಲಿದೆ. ಸಂಜೆ 6ಕ್ಕೆ ದೈವಗಳ ಕೋಲ ಪ್ರಾರಂಭವಾಗಲಿದೆ ಎಂದು ತರವಾಡು ಮನೆಯ ಮುಖ್ಯಸ್ಥ ವಿಶ್ರಾಂತ ಗ್ರಾಮಾಧಿಕಾರಿ ಸಿ.ನಾರಾಯಣ ಸಾಲಿಯಾನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.