ಅರಿವಿನ ಅಂಗಳ=ಎಂಟನೇ ಕಾರ್ಯಕ್ರಮ 7 ರಂದು
0
ಮಾರ್ಚ್ 02, 2019
ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದ ವಿದ್ಯಾರ್ಥಿ ವಿಚಾರ ಸಂಕಿರಣ ಸರಣಿಯಾಗಿರುವ "ಅರಿವಿನ ಅಂಗಳದ" ಎಂಟನೇ ಕಾರ್ಯಕ್ರಮ ಮಾ. 7 ರಂದು ಪೂರ್ವಾಹ್ನ 10ಕ್ಕೆ ವಿದ್ಯಾನಗರ ಚಾಲದಲ್ಲಿರುವ ವಿಶ್ವವಿದ್ಯಾಲಯ ಕನ್ನಡ ಸಭಾಂಗಣದಲ್ಲಿ ನಡೆಯಲಿದೆ.
ಎಂ. ಫಿಲ್ ಸಂಶೋಧನ ವಿದ್ಯಾರ್ಥಿಗಳಾದ ಸೌಮ್ಯ ಬಾಕ್ರಬೈಲ್ ರವರು ತುಳು ಕಾದಂಬರಿಗಳ ಪ್ರಾದೇಶಿಕತೆ ಹಾಗೂ ಸುಜಿತ್ ಕುಮಾರ್ ರವರು ಕುಪ್ಪೆ ಪಂಜುರ್ಲಿ ಆರಾಧನೆ ಮತ್ತು ಅನನ್ಯತೆ ವಿಷಯದಲ್ಲಿ ಪ್ರಬಂಧ ಮಂಡಿಸಲಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಆಶಾಲತ ಸಿ.ಕೆ. ಅಧ್ಯಕ್ಷತೆ ವಹಿಸುವರು. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ನಿರ್ದೇಶಕರಾದ ಡಾ. ರಾಜೇಶ್ ಬೆಜ್ಜಂಗಳ ತಿಳಿಸಿದ್ದಾರೆ.