ಮಾ.9 ರಂದು ಮಲ್ಲದಲ್ಲಿ ಸಂಪೂರ್ಣ ದ್ವಂದ್ವ ಭಾಗವತಿಕೆಯೊಂದಿಗೆ ಯಕ್ಷಗಾನ ಬಯಲಾಟ
0
ಮಾರ್ಚ್ 06, 2019
ಮುಳ್ಳೇರಿಯ: ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂಡಳಿ ಹಾಗು ತೆಂಕುತಿಟ್ಟಿನ ಹೆಸರಾಂತ ಕಲಾವಿದರ ಸಮ್ಮಿಲನದೊಂದಿಗೆ ಮಾ.9 ರಂದು ಶನಿವಾರ ರಾತ್ರಿ 8.30 ರಿಂದ ಶ್ರೀ ಕ್ಷೇತ್ರ ಮಲ್ಲ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಸಂಪೂರ್ಣ ದ್ವಂದ್ವ ಭಾಗವತಿಕೆಯೊಂದಿಗೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಲಿದೆ. ಈ ಸಂದರ್ಭದಲ್ಲಿ ಶ್ರೀ ದೇವಿಗೆ ನೂತನ ಬೆಳ್ಳಿ ಕಿರೀಟ ಸಮರ್ಪಣೆ ನಡೆಯಲಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.