ಕೊಡಂಗೆ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಏ.9 ರಿಂದ
0
ಮಾರ್ಚ್ 29, 2019
ಮಂಜೇಶ್ವರ: ಕೋಳ್ಯೂರು ಸಮೀಪದ ಕೊಡಂಗೆಯಲ್ಲಿರುವ ಅತಿ ಪುರಾತನ ಶ್ರೀನಾಗದೇವತೆ, ಸಪರಿವಾರ ಕೊಡಂಗೆತ್ತಾಯ ದೈವಗಳ ಮತ್ತು ಸಪರಿವಾರ ರಕ್ತೇಶ್ವರಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಅವರ ನೇತೃತ್ವದಲ್ಲಿ ಏ.9 ಹಾಗೂ 10 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಏ.9 ರಂದು ಬೆಳಿಗ್ಗೆ 11ಕ್ಕೆ ಗಣಪತಿಹೋಮ, ಸಂಜೆ 5ಕ್ಕೆ ಆಲಯ ಪರಿಗ್ರಹ,ಪ್ರಾಸಾದ ಶುದ್ದಿ, ಸಾಮೂಹಿಕ ಪ್ರಾರ್ಥನೆ, ಸಪ್ತಶುದ್ದಿ, ಪುಣ್ಯಾಹ ವಾಚನೆ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಪೂಜೆ ಬಲಿ, ಅಧಿವಾಸ ಪೂಜೆ ಇತ್ಯಾದಿ ವಿಧಿವಿಧಾನಗಳು ನಡೆಯಲಿವೆ.
ಏ.10 ರಂದು ಬೆಳಿಗ್ಗೆ 6ಕ್ಕೆ ಕಲಶ ಪ್ರತಿಷ್ಠೆ, ಗಣಪತಿಹೋಮ, ಪ್ರತಿಷ್ಠಾಂಗ ಹೋಮ, 10.36 ಕ್ಕೆ ನಾಗಪ್ರತಿಷ್ಠೆ, ಸಪರಿವಾರ ಕೊಡಂಗೆತ್ತಾಯ ದೈವ ಪ್ರತಿಷ್ಠೆ, ಕಲಶಾಭಿಷೇಕ, ತೀರ್ಥಬಾವಿಯ ಸಮರ್ಪಣೆ ನಡೆಯಲಿದೆ. 11 ರಿಂದ ಸಪರಿವಾರ ರಕ್ತೇಶ್ವರಿ ದೈವ ಪ್ರತಿಷ್ಠೆ, ತಂಬಿಲ, ಮಹಾಪೂಜೆ ನಡೆಯಲಿದೆ. 11.30ಕ್ಕೆ ಕೊಡಂಗೆತ್ತಾಯ ದೈವಗಳ ಭಂಡಾರ ಹೊರಡುವುದು, 12.30ಕ್ಕೆ ನಾಗದೇವರು ಮತ್ತು ಕೊಡಂಗೆತ್ತಾಯ ಸನ್ನಿಧಿಯಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2.30ಕ್ಕೆ ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಅವರಿಂದ ಆಶೀರ್ವಚನ ನಡೆಯಲಿದೆ. 2.45 ರಿಂದ 4.15ರ ವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಊರ-ಪರವೂರ ನುರಿತ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿ ನಡೆಯಲಿದೆ. ಸಮಜೆ 5ಕ್ಕೆ ಪುನಃಪ್ರತಿಷ್ಠೆಯ ಅಂಗವಾಗಿ ಕೊಡಂಗೆತ್ತಾಯ ದೈವಗಳ ನೇಮೋತ್ಸವ, ರಾತ್ರಿ 8 ಕ್ಕೆ ಭಂಡಾರ ಹಿಂತಿರುಗುವುದು, ರಾತ್ರಿ 9 ರಿಂದ ಅನ್ನಸಂತರ್ಪಣೆ ನಡೆಯುವುದರೊಂದಿಗೆ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ.