ಮಾ.9 ರಂದು ಬ್ರಹ್ಮಕಲಶದ ದಿನಾಚರಣೆ
0
ಮಾರ್ಚ್ 06, 2019
ಮಂಜೇಶ್ವರ: ವರ್ಕಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶದ ದಿನಾಚರಣೆ, ಅಷ್ಟಮ ವರ್ಷದ ಭಜನೋತ್ಸವ ಮತ್ತು ಶ್ರೀ ಮಹಾಗಣಪತಿ ದೇವರಿಗೆ ರಜತ ಕವಚ ಸಮರ್ಪಣೆ ಮಾ.9 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಅಂದು ಪ್ರಾತ: 6.43 ಕ್ಕೆ ಭಜನೋತ್ಸವ ಆರಂಭ, ದೀಪ ಪ್ರಜ್ವಲನೆ, ಪೂರ್ವಾಹ್ನ 8 ರಿಂದ ಗಣಪತಿ ಹವನ, ನವಕ ಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರಿಗೆ ರಜತ ಕವಚ ಸಮರ್ಪಣೆ, ಮಧ್ಯಾಹ್ನ 12.30 ಕ್ಕೆ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ, 1.30 ಕ್ಕೆ ಅನ್ನ ಸಂತರ್ಪಣೆ, ಸಂಜೆ 6.39 ಕ್ಕೆ ಭಜನೋತ್ಸವ ಮಂಗಲ, ರಾತ್ರಿ 7.30 ರಿಂದ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.