ಮಾ.9 ರಂದು ಕನ್ನಡ ಸಾಂಸ್ಕøತಿಕ ವೈವಿಧ್ಯ `ತನು ಕನ್ನಡ - ಮನ ಕನ್ನಡ'
0
ಮಾರ್ಚ್ 06, 2019
ಕಾಸರಗೋಡು: ಸಾಮಾಜಿಕ ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಮೇಘ ರಂಜನಾ ಚಂದ್ರಗಿರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಏರ್ಪಡಿಸುವ ಕನ್ನಡ ಸಾಂಸ್ಕøತಿಕ ವೈವಿಧ್ಯ `ತನು ಕನ್ನಡ - ಮನ ಕನ್ನಡ' ಕಾರ್ಯಕ್ರಮ ಮಾ.9 ರಂದು ಮಧ್ಯಾಹ್ನ 2.30 ರಿಂದ ರಾತ್ರಿ 8 ರ ತನಕ ಕಾಂಞಂಗಾಡ್‍ನ ಶ್ರೀ ಕೃಷ್ಣ ಮಂದಿರದಲ್ಲಿ ನಡೆಯಲಿದೆ.
ಮಧ್ಯಾಹ್ನ 4.45 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ನಗರಸಭಾ ಸದಸ್ಯ ಹೆಚ್.ಆರ್.ಶ್ರೀಧರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಕಾಂಞಂಗಾಡ್‍ನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಕುಲ್‍ದಾಸ್ ಕಾಮತ್ ಉದ್ಘಾಟಿಸುವರು. ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರು `ಮೇಘ ರಂಜನಾ' ಲೋಕಾರ್ಪಣೆ ಮಾಡಲಿದ್ದಾರೆ. ಕಾಂಞಂಗಾಡ್ ನಗರಸಭಾ ಸದಸ್ಯೆ ಸುಕನ್ಯಾ ಗೌರವ ಉಪಸ್ಥಿತರಿರುವರು. ಕಾಂಞಂಗಾಡ್‍ನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಯು.ಪಿ.ಕುಣಿಕುಳ್ಳಾಯ, ಹೊಸದುರ್ಗ ಕನ್ನಡ ಸಂಘ ಅಧ್ಯಕ್ಷ ಹೆಚ್.ಎಸ್.ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಮೇಘ ರಂಜನಾ ಆಡಳಿತ ನಿರ್ದೇಶಕ ಪುರುಷೋತ್ತಮ್ ಕೊಪ್ಪಲ್, ನಿರ್ದೇಶಕಿ ರೂಪಕಲಾ ಕೊಪ್ಪಲ್ ಉಪಸ್ಥಿತರಿರುವರು.
ಮಧ್ಯಾಹ್ನ 2.30 ರಿಂದ ಭಜನಾಂತರಂಗ ಕಾರ್ಯಕ್ರಮ ನಡೆಯುವುದು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ದೀಪ ಪ್ರಜ್ವಲನೆಗೊಳಿಸುವರು. ಸಂಜೆ 6 ರಿಂದ ಅಂತಾರಾಷ್ಟ್ರೀಯ ಗಾಯಕ ರವೀಂದ್ರ ಪ್ರಭು, ಕಿಶೋರ್ ಪೆರ್ಲ, ಮೇಘನಾ ಕೊಪ್ಪಲ್ ಅವರಿಂದ ಭಕ್ತಿ ಭಾವ ಜನಪದ ಗೀತೆಗಳ ಝೇಂಕಾರ `ಜಯ ಹೇ...ಕನ್ನಡ ತಾಯೆ..' ಕಾರ್ಯಕ್ರಮ ನಡೆಯಲಿದೆ.