ವಿಶ್ವಕಪ್ ಕ್ರಿಕೆಟ್ : ಟೀಂ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ
0
ಮಾರ್ಚ್ 02, 2019
ಹೈದ್ರಾಬಾದ್: ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಮಹೇಂದ್ರ ಸಿಂಗ್ ಧೋನಿ, ಪೃಥ್ವಿ ಶಾ ಹಾಗೂ ಮಹಿಳಾ ತಂಡದ ಹರ್ಮನ್ ಪ್ರೀತ್ ಕೌರ್ ಹಾಗೂ ಜೆಮಿಮಾ ರೊಡ್ರಿಗಸ್ ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಐದು ದಿನಗಳ ಏಕದಿನ ಕ್ರಿಕೆಟ್ ಸರಣಿಯ ಆರಂಭದ ದಿನವಾದ ಇಂದು ಮೊದಲ ಬಾರಿಗೆ ಪುರುಷ ತಂಡದ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಹಿಂದೆ 1983, 2011 ಹಾಗೂ 2007ರಲ್ಲಿ ನಡೆದ ವಿಶ್ವಕಪ್ ಟೂರ್ನಿ ವೇಳೆಯಲ್ಲಿ ಜೆರ್ಸಿ ಬದಲಾಯಿಸಲಾಗಿತ್ತು. ಆ ಸಂದರ್ಭದಲ್ಲಿ ಭಾರತ ಗೆಲುವು ಸಾಧಿಸಿತ್ತು.
ಏಕದಿನ ಕ್ರಿಕೆಟ್ ಸರಣಿ ಸಂದರ್ಭಕ್ಕಾಗಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಮೈದಾನದಲ್ಲಿ ಆಡಲು ಅನುಕೂಲಕರವಾಗಿದೆ ಎಂದು ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಈ ಹಿಂದೆ 1983ರಲ್ಲಿ ನಡೆದ ಮೊದಲ ವಿಶ್ವಕಪ್, ಟಿ-20 ವಿಶ್ವಕಪ್ ಹಾಗೂ ಎರಡನೇ ಬಾರಿಗೆ ಸೀಮಿತ ಓವರ್ ಗಳ ಪಂದ್ಯದ ಸಂದರ್ಭದಲ್ಲಿ ಜೆರ್ಸಿ ಬದಲಾಯಿಸಿದ ಸಂದರ್ಭದಲ್ಲಿ ಭಾರತ ಗೆದ್ದಿರುವುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.