ಅಂಗವಿಕಲರ ಮತದಾನಕ್ಕೆ ಸಹಕಾರಿ ಮೊಬೈಲ್ ಆ್ಯಪ್
0
ಮಾರ್ಚ್ 30, 2019
ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲ ಮತದಾರರ ಸಹಾಯಕ್ಕಾಗಿ ಕೇಂದ್ರ ಚುನಾವಣೆ ಆಯೋಗ ವಿಶೇಷ ರೀತಿಯ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿದೆ.
ಈ ಆ್ಯಪ್ ಮೂಲಕ ವಿಶೇಷ ಅಂಗವಿಕಲರಲ್ಲಿ ನೂತನವಾಗಿ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು, ಈಗಾಗಲೇ ಮತದಾತರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಪಿ.ಡಬ್ಲ್ಯೂ.ಡಿ.(ಪರ್ಸನ್ಸ್ ವಿದ್ ಡಿಸೈಬಿಲಿಟೀಸ್) ಆಗಿ ಹೆಸರು ನೋಂದಣಿ ನಡೆಸಲು ಸಾಧ್ಯವಿದೆ. ಇಂಥಾ ಮತದಾತರ ದೂರುಗಳನ್ನು ನೋಂದಣಿ ನಡೆಸಲೂ ಈ ಮೊಬೈಲ್ ಆ್ಯಪ್ ನಲ್ಲಿ ಸೌಲಭ್ಯಗಳಿವೆ. ಆಂಡ್ರಾಯಿಡ್ ಫ್ಲಾಟ್ ಫಾರ್ಮ್‍ನಲ್ಲಿ ಈ ಆ್ಯಪ್ ಚಟುವಟಿಕೆ ನಡೆಸುಸುತ್ತದೆ. ಪ್ಲೇ ಸ್ಟೋರ್‍ನಿಂದ ಪಿ.ಡಬ್ಲ್ಯೂ.ಡಿ. ಆ್ಯಪ್ ಡೌನ್ ಲೋಡ್ ನಡೆಸಿ ಮೊಬೈಲ್ ನಂಬ್ರ ನೀಡಿ ಒ.ಟಿ.ಪಿ. ನೀಡಿ ನೋಂದಣಿ ನಡೆಸಬಹುದಾಗಿದೆ. ಆ್ಯಪ್ ಮೂಲಕ ನೀಡಲಾಗುವ ಅರ್ಜಿಗಳನ್ನು ಬಿ.ಎಲ್.ಒ.ಗೆ ಹಸ್ತಾಂತರಿಸಲಾಗುವುದು. ಬಿ.ಎಲ್.ಒ. ಮನೆಗೆ ಭೇಟಿ ನಿಡಿ ತಪಾಸಣೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಮತದಾನ ನಡೆಸಲು ತೆರಳಲು ಗಾಲಿಕುರ್ಚಿಗಾಗಿ ಈ ಆ್ಯಪ್ ಮೂಲಕ ಮನವಿ ಸಲ್ಲಿಸಬಹುದಾಗಿದೆ.