ಅಡುಗೆ ಅನಿಲ ವಿತರಣೆ
0
ಮಾರ್ಚ್ 02, 2019
ಮುಳ್ಳೇರಿಯ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಂತೆ ಕಾರಡ್ಕ ಗ್ರಾಮ ಪಂಚಾಯಿತಿಯ 7ನೇ ವಾರ್ಡಿನ ಕುಂಟಾರಿನಲ್ಲಿ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಣೆ ಬುಧವಾರ ನಡೆಯಿತು.
ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ ಫಲಾನುಭವಿಗಳಿಗೆ ಅಡುಗೆ ಅನಿಲವನ್ನು ವಿತರಿಸಿದರು. ರಾಜೇಶ್ ಪಾಂಡಿ, ಸಿಡಿಎಸ್ ಬೇಬಿ, ಎಡಿಎಸ್ ಚಂದ್ರಕಲಾ ಮತ್ತು ಕೇಸರಿ ಬಳಗದ ಸದಸ್ಯರು ಉಪಸ್ಥಿತರಿದ್ದರು.