ಇಂದು ಶೇಡಿಕಾವಿನಲ್ಲಿ ಯಕ್ಷಗಾನ ತಾಳಮದ್ದಳೆ
0
ಮಾರ್ಚ್ 03, 2019
ಕುಂಬಳೆ: ಕುಂಬಳೆಸಮೀಪದ ಶೇಡಿಕಾವು ಶ್ರೀಶಂಕರನಾರಾಯಣ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಶೇಡಿಕಾವು ಶ್ರೀಪಾರ್ತಿಸುಬ್ಬ ಯಕ್ಷಗಾನ ಸಂಘದ ಆಶ್ರಯದಲ್ಲಿ ಅತಿಥಿ ಕಲಾವಿದರ ಪಾಲ್ಗೊಳ್ಳುವಿಕೆಯೊಂದಿಗೆ ಅಪರಾಹ್ನ 3.30 ರಿಂದ ಮಾಗಧ ವಧೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಹಿಮ್ಮೇಳದಲ್ಲಿ ಪ್ರದೀಪ್ ಕುಮಾರ್ ಗಟ್ಟಿ ಕಂಬಳಪದವು(ಭಾಗವತರು), ಲಕ್ಷ್ಮೀಶ ಬೇಂಗ್ರೋಡಿ ಹಾಗೂ ಮುರಳೀಧರ ಶೇಡಿಕಾವು(ಚೆಂಡೆ ಹಾಗೂ ಮದ್ದಳೆ)ಯಲ್ಲಿ ಸಹಕರಿಸುವರು. ಮುಮ್ಮೇಳದಲ್ಲಿ ಪಕಳಕುಂಜ ಶಾಮ ಭಟ್, ದಯಾನಂದ ಕತ್ತಲ್‍ಸಾರ್, ಉದಯಶಂಕರ ಮಜಲು ಸಂವಾದದ ಮೂಲಕ ಪಾತ್ರಗಳಿಗೆ ಜೀವ ತುಂಬುವರು.