ಚುನಾವಣೆ: ಅತ್ಯಧಿಕ ಪ್ರಮಾಣದ ವಿಶೇಷಚೇತನ ಮತದಾರರಿರುವುದು ಮಂಜೇಶ್ವರ, ಉದುಮಾ ಕ್ಷೇತ್ರಗಳಲ್ಲಿ
0
ಮಾರ್ಚ್ 27, 2019
ಕಾಸರಗೋಡು: ಲೋಕಸಭೆ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿಶೇಷಚೇತನರಾದ ಮತದಾತರಿರುವುದು ಮಂಜೇಶ್ವರ, ಉದುಮಾ ವಿಧಾನಸಭೆ ಕ್ಷೇತ್ರಗಳಲ್ಲಿ.
Àುಂಜೇಶ್ವರದಲ್ಲಿ 1206 ಮತದಾರರು ಮತ್ತು ಉದುಮಾದಲ್ಲಿ 1217 ಮತದಾರರು ವಿಶೇಷಚೇತನರಾಗಿದ್ದಾರೆ. ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 4813 ಮಂದಿ ಈ ಬಾರಿ ವಿಶೇಷಚೇತನ ಮತದಾರರಿದ್ದಾರೆ. ಅತಿ ಕಡಿಮೆ ಪ್ರಮಾಣದಲ್ಲಿ ವಿಶೇಷಚೇತನ ಮತದಾರರಿರುವ ಕ್ಷೇತ್ರ ತ್ರಿಕರಿಪುರ ಆಗಿದೆ. ಇಲ್ಲಿ 687 ಮಂದಿ ವಿಶೇಷಚೇತನ ಮತದಾರರಿದ್ದಾರೆ. ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ 732, ಕಾ?ಂಗಾಡ್ ವಿಧಾನಸಭೆ ಕ್ಷೇತ್ರದಲ್ಲಿ 971 ಮತದಾತರು ವಿಶೇಷಚೇತನರಾಗಿದ್ದಾರೆ.
ವಿಶೇಷ ಚೇತನ ಮತದಾರರನ್ನು ಪ್ರಧಾನವಾಗಿ ಬೇರೆ ಬೇರೆ ರೀತಿ ವರ್ಗೀಕರಣ ನಡೆಸಲಾಗಿದೆ. ದೃಷ್ಟಿದೋಷ ಇರುವವರು, ಶ್ರವ್ಯ ದೋಷ ಇರುವವರು, ಮಾತು ಬಾರ್ದೇ ಇರುವವರು, ನಡೆದಾಡಲು ಸಧ್ಯವಿಲ್ಲದೇ ಇರುವವರು , ಇತರ ವೈಕಲ್ಯ ಇರುವವರು ಎಂಬುದಾಗಿ ವಿಂಗಡಿಸಲಾಗಿದೆ.