HEALTH TIPS

ಲೋಕಸಭಾ ಚುನಾವಣೆ= ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ

ಕಾಸರಗೋಡು: ಲೋಕಸಭಾ ಚುನಾವಣೆ ಸಿದ್ಧತೆಯ ಪೂರ್ವಭಾವಿ ಅಂಗವಾಗಿ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿತು. ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಚುನಾವಣೆಯ ನಾಮಪತ್ರ ಸಲ್ಲಿಕೆ, ಪ್ರಚಾರ, ಚುನಾವಣೆ ಸಂಹಿತೆ, ವೆಚ್ಚ ಇತ್ಯಾದಿ ವಿಚಾರಗಳ ಕುರಿತು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಕಾನೂನು ಬಾಹಿರ ರೀತಿಯ ಜಾಹೀರಾತುಗಳ ತೆರವಿಗೆ ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು. ನಾಮಪತ್ರಿಕೆ ಸಲ್ಲಿಕೆ ವೇಳೆ ಜಿಲ್ಲಾಧಿಕಾರಿ ಕಚೇರಿಗೆ 4 ಮಂದಿಗೆ ಮಾತ್ರ ಪ್ರವೇಶ, ಕಚೇರಿ ಆವರಣದ 100 ಮೀಟರ್ ಅಂತರದಲ್ಲಿ 3 ವಾಹನಗಳಿಗೆ ಮಾತ್ರ ಪ್ರವೇಶದ ಅನುಮತಿ ಇರುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಅಭ್ಯರ್ಥಿಗಳ ಹೆಸರಲ್ಲಿ ಕಾನೂನು ಪ್ರಕರಣಗಳು ದಾಖಲಾಗಿದ್ದಲ್ಲಿ ಅವುಗಳ ಸ್ಪಷ್ಟ ಮಾಹಿತಿ ವರದಿ ಮಾಡಬೇಕು. ನಡವಳಿಕೆ ಸಂಹಿತೆ ಪಾಲಿಸುವಲ್ಲಿ ಜಾಗ್ರತೆ ವಹಿಸಬೇಕು ಎಂದು ನುಡಿದರು. ಮಂಜೇಶ್ವರ, ಕಾಸರಗೋಡು, ಉದುಮಾ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಸಂಬಂಧ ಸಾಮಾಗ್ರಿಗಳ ವಿತರಣೆ ಕಾಸರಗೋಡು ಸರಕಾರಿ ಕಾಲೇಜಿನಲ್ಲೂ, ಕಾಞÂಂಗಾಡ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಸಂಬಂಧ ಸಾಮಾಗ್ರಿಗಳ ವಿತರಣೆ ಪಡನ್ನಕ್ಕಾಡು ನೆಹರೂ ಕಾಲೇಜಿನಲ್ಲೂ ವಿತರಣೆ ನಡೆಸಲಾಗುವುದು ಎಂದು ತಿಳಿಸಲಾಯಿತು. ಪೇಯ್ಡ್ ನ್ಯೂಸ್ ಅಥವಾ ಬೇರಾವುದೋ ರೀತಿ ಸುಳ್ಳುಸುದ್ದಿ ಹರಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಸಿಬ್ಬಂದಿಗೆ ಅಂಚೆಮತ ನೀಡಿಕೆ ನಿಟ್ಟಿನಲ್ಲಿ ಆನ್ ಲೈನ್ ಸೌಲಭ್ಯ,ಸರಕಾರಿ ಸಂಸ್ಥೆಗಳಿಗೆ ಸಂಬಂಧಿಸಿ ಚಟುವಟಿಕೆ ನಡೆಸುವ ವಾಹನಚಾಲಕರಿಗೆ ಇಲೆಕ್ಷನ್ ಡ್ಯೂಟಿ ಸರ್ಟಿಫಿಕೆಟ್ (ಇಡಿಸಿ) ನೀಡಿ ಲೋಕಸಭೆ ಕ್ಷೇತ್ರದ ಸೌಕರ್ಯವಿರುವ ಬೂತ್ ನಲ್ಲಿ ಮತದಾನ ನಡೆಸಲು ಸೌಕರ್ಯ ಏರ್ಪಡಿಸಲಾಗುವುದು. ಜಿಲ್ಲೆಯ ವಿಶೇಷ ಹಿನ್ನೆಲೆ ಗಮನಿಸಿ ಬೆಳಿಗ್ಗೆ 6 ರಿಂದ 6.30ರ ವರೆಗೆ ಮೋಕ್ ಪೋಲ್ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಚುನಾವಣಾ ತರಬೇತಿ ನೋಡೆಲ್ ಅಧಿಕಾರಿ ಕೆ.ವಿನೋದ್ ಕುಮಾರ್ ತರಗತಿ ನಡೆಸಿದರು. ಸಭೆಯಲ್ಲಿ ಸಹಾಯಕ ಜಿಲ್ಲಾಧಿಕಾರಿ (ಚುನಾವಣೆ),ಹಣಕಾಸು ಅಧಿಕಾರಿ, ಜ್ಯೂನಿಯರ್ ಸುಪರಿಟೆಂಡೆಂಟ್(ಚುನಾವಣೆ), ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries