ಡಾ.ಸಂತೋಷ ಭಾರತೀ ಶ್ರೀಗಳಿಂದ ಸಮುದಾಯ ಮಾರ್ಗದರ್ಶನ
0
ಮಾರ್ಚ್ 02, 2019
ಮಂಜೇಶ್ವರ: ಜಿಲ್ಲೆಯ ಗುತ್ತು, ಬಾಳಿಕೆ ಹಾಗೂ ಪ್ರತಿಷ್ಠಿತ ಮನೆತನಗಳ ವರ್ತಮಾನದ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಲು ಬಾರ್ಕೂರು ಶ್ರೀ ಸಂಸ್ಥಾನದ ಮಠಾಧೀಶರಾದ ಡಾ.ಶ್ರೀ ವಿಶ್ವ ಸಂತೋಷ ಭಾರತೀ ಶ್ರೀಪಾದಂಗಳು ಅವರು ಇತ್ತೀಚೆಗೆ ತಲಪಾಡಿಯ ವಿಶ್ವಾಸ್ ಅಡಿಟೋರಿಯಂ ನಲ್ಲಿ ವಿಶೇಷ ಸಭೆ ನಡೆಸಿ ಮಾರ್ಗದರ್ಶನ ಆಶೀರ್ವಚನ ನೀಡಿದರು.
ಮಂಜು ಭಂಡಾರಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ದುಗ್ಗ ಭಂಡಾರಿ ಸಾರ್ಥಾವು ಗುತ್ತು, ಶ್ರೀಧರ ಶೆಟ್ಟಿ ಮುಟ್ಟ, ಗೋಪಾಲ ಶೆಟ್ಟಿ ಅರಿಬೈಲು ಮೊದಲಾದವರು ಉಪಸ್ಥಿತರಿದ್ದರು.
ಸಮಸ್ತ ಬಂಟ ಸಮಾಜದ ಆಚಾರ-ವಿಚಾರಗಳು, ಆರಾಧನೆಯ ದೈವ ದೇವರು, ನಾಗಾರಾಧನಾ ಕ್ರಮಗಳು, ಪರಂಪರೆಯ ಇತರ ಆಚಾರ-ಅನುಷ್ಠಾನಗಳನ್ನು ಬಿಟ್ಟು ತುಳು ಸಂಸ್ಕøತಿಗೆ ವ್ಯತಿರಿಕ್ತವಾಗಿ ಆಚರಣೆಗಳು ಶಿಥಿಲವಾಗುತ್ತಿರುವ ಬಗ್ಗೆ ಸಮಾಜ ಬಾಂಧವರನ್ನು ಜಾಗೃತಗೊಳಿಸುವ ಭಾಗವಾಗಿ ಜಿಲ್ಲೆಯ ಸಮಸ್ತ ಬಂಟ ಗುತ್ತು, ಬಾಳಿಕೆ ಮನೆತನಗಳ ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ಈ ಸಂದರ್ಭ ರೂಪಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಸುಕುಮಾರ ಶೆಟ್ಟಿ ಯಾನೆ ಮಂಜು ಭಂಡಾರಿ ಉದ್ಯಾವರ ಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷಕುಮಾರ್ ಶೆಟ್ಟಿ ಬಾಕ್ರಬೈಲು ಧರ್ಮಚಾವಡಿ, ಕೋಶಾಧಿಕಾರಿಯಾಗಿ ಶ್ರೀಧರ ಶೆಟ್ಟಿ ಮುಟ್ಟ, ಉಪಾಧ್ಯಕ್ಷರಾಗಿ ಸುರೇಶ ಶೆಟ್ಟಿ ಮುದ್ಕುಂಜ ಗುತ್ತು, ನಿರಂಜನ ರೈ ಪೆರಡಾಲ ಗುತ್ತು, ನಾರಾಯಣ ನಾಯ್ಕ ನಡುಹಿತ್ತಿಲು, ಜೊತೆ ಕಾರ್ಯದರ್ಶಿಗಳಾಗಿ ದೇವೀಪ್ರಸಾದ್ ಬೆಜ್ಜ, ವಳಮಲೆಪದ್ಮನಾಭ ಶೆಟ್ಟಿ, ಸಹ ಕೋಶಾಧಿಕಾರಿಯಾಗಿ ಗೋಪಾಲ ಶೆಟ್ಟಿ ಕಿನ್ನಿಮಜಲು ಮತ್ತು ಇತರ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿ ರಚಿಸಲಾಯಿತು.