ಮತದಾನ ಜಾಗೃತಿ: ಸ್ವೀಪ್ ವತಿಯಿಂದ ವಿವಿಧ ಕಾರ್ಯಕ್ರಮಗಳು
0
ಮಾರ್ಚ್ 27, 2019
ಕಾಸರಗೋಡು: ಸ್ವೀಪ್ ನ ಮತದಾನ ಜಾಗೃತಿ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯಲ್ಲಿ ಈಗಾಗಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆದಿವೆ. ಮುಂದಿನ ಹಂತವಾಗಿ ಮಾ.31ರಂದು ಪಳ್ಳಿಕ್ಕರೆ ಬೀಚ್ ಪಾರ್ಕ್ ನಲ್ಲಿ ಮತದಾನ ಸಂದೇಶ ಯಾತ್ರೆ ನಡೆಯಲಿದೆ.ಮತದಾನ ಜಾಗೃತಿ ಅಂಗವಾಗಿ ಏ.1ರಂದು ಬೀದಿ ನಾಟಕಗಳು ಜರುಗಲಿದ್ದು, ಹೊಸಂಗಡಿಯಲ್ಲಿ ಬೆಳಗ್ಗೆ 9.30ಕ್ಕೆ , ಕುಂಬಳೆಯಲ್ಲಿ ಮಧ್ಯಾಹ್ನ 12 ಗಂಟೆಗೆ, ಪೆರ್ಲದಲ್ಲಿ ಮಧ್ಯಾಹ್ನ 3 ಗಂಟೆಗೆ, 2ರಂದು ಕಾಸರಗೋಡು, ಚೆರ್ಕಳ, ಮುಳ್ಳೆರಿಯದಲ್ಲಿ, 3ರಂದು ಕುಂಡಂಕುಳಿಯಲ್ಲಿ, ಚಟ್ಟಂಚಾಲ್ ನಲ್ಲಿ, ಉದುಮಾದಲ್ಲಿ , 4 ರಂದು ಕಾ?ಂಗಾಡ್ ನಲ್ಲಿ, ಅಂಬಲತ್ತರದಲ್ಲಿ, ಪನತ್ತಡಿಯಲ್ಲಿ ಬೀದಿ ನಾಟಕ ನಡೆಯಲಿದೆ.
ಏ.8ರಂದು ಕಾಸರಗೋಡು ಎಲ್.ಬಿ.ಎಸ್. ಇಂಇನಿಯರಿಂಗ್ ಲಾಲೇಜಿನಲ್ಲಿ, ಏ.11ರಂದು ತ್ರಿಕರಿಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ "ನನ್ನ ಮತದಾನ ನನ್ನ ಹಕ್ಕು" ಪ್ರಚಾರ ಕಾರ್ಯಕ್ರಮ ನಡೆಯಲಿದೆ.
ಏ.10ರಂದು ಮತದಾನದ ಮಹತ್ವ ಮತ್ತು ಹಸುರು ಸೌಹಾರ್ದ ಚುನಾವಣೆಯ ಪ್ರಾಧಾನ್ಯ ಜನತೆಗೆ ಮನವರಿಕೆ ನಡೆಸುವ ನಿಟ್ಟಿನಲ್ಲಿ ಗೋಡೆಬರಹ ಸಂದೇಶ ನಡೆಸಲಾಗುವುದು. ಕಾಸರಗೋಡು ತಾಲೂಕು ಕಚೇರಿ, ಕಾ?ಂಗಹಾಡ್ ಆರ್.ಡಿ.ಒ. ಕಚೇರಿ ಆವರಣ ಗೋಡೆಗಳಲ್ಲಿ ಈ ಬರಹ ಸಂದೇಶ ನಡೆಸಲಾಗುವುದು. ಸೀತಾಂಗೋಳಿ, ಪೆರ್ಮುದೆ, ಬಂದ್ಯೋಡು, ಹೊಸಂಗಡಿ, ವರ್ಕಾಡಿ ಮೊದಲಾದೆಡೆ ಬೈಕ್ ರ್ಯಾಲಿ ನಡೆಸಲಾಗುವುದು.
16ರಂದು ಪಾಣತ್ತೂರು, ಪನತ್ತಡಿ, ಪ್ರದೇಶಗಳಲ್ಲಿ ಮಲೆನಾಡ ಮತದಾನ ಸಂದೇಶ ಯಾತ್ರೆ ನಡೆಯಲಿದೆ. 17ರಂದು ಸಂಜೆ 5 ಗಂಟೆಗೆ ಕಾಸರಗೋಡು ನೂತನ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ಆವರಣ ವರೆಗೆ ಸಾಮೂಹಿಕ ಓಟ ನಡೆಯಲಿದೆ.