ಬಜೆ ದೇಲಂತೊಟ್ಟು : ವಿಜ್ಞಾಪನಾ ಪತ್ರ ಬಿಡುಗಡೆ
0
ಮಾರ್ಚ್ 06, 2019
ಕುಂಬಳೆ: ಬಂದ್ಯೋಡು ಸಮೀಪದ ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಮತ್ತು ನಿಧಿ ಸಮರ್ಪಣಾ ಸಮಾರಂಭ ಶನಿವಾರ ಜರಗಿತು. ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಶ್ರೀ ದೇವರಿಗೆ ಪವಮಾನಾಭಿಷೇಕ ನಡೆಯಿತು.
ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಪುರೋಹಿತ ವೇದಮೂರ್ತಿ ಗಣೇಶ ನಾವಡ ಉಪಸ್ಥಿತರಿದ್ದು , ಅನುಗ್ರಹ ಭಾಷಣ ಮಾಡಿದರು. ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು.
ಬಜೆ ಶ್ರೀ ಕ್ಷೇತ್ರದ ಅಧ್ಯಕ್ಷ ಡಾ.ಎಂ.ಶ್ರೀಧರ ಭಟ್ ಉಪ್ಪಳ, ಉದ್ಯಮಿ ಬಿ.ವಸಂತ ಪೈ ಬದಿಯಡ್ಕ, ವಿವಿಧ ವಲಯಗಳ ಪ್ರಮಖರಾದ ನಾರಾಯಣ ಹೆಗ್ಡೆ ಕೋಡಿಬೈಲು, ಶಶಿಧರ ಶೆಟ್ಟಿ ಗ್ರಾಮಚಾವಡಿ, ಎಂ.ಕೆ.ಅಶೋಕ್‍ಕುಮಾರ್ ಹೊಳ್ಳ , ಚಿದಾನಂದ ಮಯ್ಯ, ಮೀರಾ ಆಳ್ವ ಬೇಕೂರು, ಗೋಪಾಲಕೃಷ್ಣ ಮಯ್ಯ ಬಜೆ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈದರು. ಮಧ್ಯಾಹ್ನ ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮವು ಸಮಾರೋಪಗೊಂಡಿತು.