ನ್ಯಾಶನಲ್ ಖಾದಿ ಲೇಬರ್ ಯೂನಿಯನ್ ನಿಂದ ಜಾಥಾ
0
ಮಾರ್ಚ್ 30, 2019
ಸಮರಸ ಚಿತ್ರ ಸುದ್ದಿ: ಕಾಸರಗೋಡು: ಖಾದಿ ಉದ್ದಿಮೆಯನ್ನು ಸಂರಕ್ಷಿಸಬೇಕು, ಕೂಲಿ, ಉದ್ಯೋಗ ಖಾತರಿ ಪಡಿಸಬೇಕು, ಬೋನಸ್ ವಿತರಿಸಬೇಕು, ಕನಿಷ್ಠ ವೇತನ ಜಾರಿಗೊಳಿಸಬೇಕು, ಕ್ಷೇಮ ನಿಧಿ ಸವಲತ್ತು ಪರಿಷ್ಕರಿಸಬೇಕು, ಎಲ್ಲಾ ಸವಲತ್ತುಗಳನ್ನು ವಿತರಿಸಬೇಕು, ಸರಕಾರಿ ಕಚೇರಿಗಳಲ್ಲಿ ಖಾದಿ ಬಳಸುವಂತೆ ಕಡ್ಡಾಯಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ನ್ಯಾಶನಲ್ ಖಾದಿ ಲೇಬರ್ ಯೂನಿಯನ್(ಐಎನ್‍ಟಿಯುಸಿ) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ನಡೆದ ಜಾಥಾ ಮತ್ತು ಧರಣಿಯನ್ನು ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.