ಮಹಿಳೆಯರಿಗೂ ರಾಷ್ಟ್ರಕವಿ ಪದವಿ ದೊರಕುವಂತಾಗಲಿ- ಸಾಹಿತಿ ವಿಜಯ ವಿಷ್ಣು ಡೋಂಗ್ರೆ
0
ಮಾರ್ಚ್ 02, 2019
ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ಇತ್ತೀಚೆಗೆ ನಡೆದ ಕೇರಳ ಕನ್ನಡ ಸಾಹಿತ್ಯ ಸಂಗಮದ ಉದ್ಘಾಟನೆಯ ಸಂದರ್ಭದಲ್ಲಿ ನಡೆದ ಸಂವಾದದಲ್ಲಿಯ ಸಭಿಕರ ಪ್ರಶ್ನೆಗೆ ಉತ್ತರಿಸಿದ ಮಡಿಕೇರಿಯಲ್ಲಿ ನಡೆದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿಜಯ ವಿಷ್ಣು ಡೋಂಗ್ರೆ ಯವರು ಮುಂಬರುವ ದಿನಗಳಲ್ಲಿ ಮಹಿಳೆಯರಿಗೂ ರಾಷ್ಟ್ರಕವಿ ಪದವಿ ದೊರಕುವಂತಾಗಲಿ. ಅದಕ್ಕೆ ಪ್ರೇರಣೆ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಯವರ ನಿವಾಸದ ಗಿಳಿವಿಂಡುವೇ ಆಗಲೆಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ಬಗ್ಗೆ ನಿವೃತ್ತ ಆಕಾಶವಾಣಿ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಅವರು, ಮಕ್ಕಳ ಸಾಹಿತ್ಯ ಅಗತ್ಯ ಮತ್ತು ಭವಿಷ್ಯದ ಬಗ್ಗೆ ಹಿರಿಯ ಸಾಹಿತಿ ಡಾ.ರಮಾನಂದ ಬನಾರಿಯವರೂ ವಿಚಾರ ಮಂಡನೆ ನಡೆಸಿದರು
ಕಾಸರಗೋಡಿನ ಹಿರಿಯ ಸಾಹಿತಿಗಳಾದ ಶ್ರೀಕೃಷ್ಣಯ್ಯ ಅನಂತಪುರ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡದ ಕಟ್ಟೆ ಸಂಸ್ಥಾಪಕ ಡಾ. ಅಣ್ಣಯ್ಯ ಕುಲಾಲ್ ವೇದಿಕೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು. ವೇದಿಕೆಯ ಅಧ್ಯಕ್ಷ ಚುಟುಕು ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷತೆ ವಹಿಸಿ ಸರ್ವರ ಸಹಕಾರ ಕೋರಿದರು. ಸಾಹಿತ್ಯ ಸಂವಾದವನ್ನು ಜಿ.ವೀರೇಶ್ವರ ಕರ್ಮರ್ಕರ್ ನಡೆಸಿಕೊಟ್ಟರು. ಸಂಘಟನಾ ಕಾರ್ಯದರ್ಶಿ ಗಣೇಶ್ ಪ್ರಸಾದ ನಾಯಕ್ ಸ್ವಾಗತಿಸಿ, ಕಾರ್ಯದರ್ಶಿ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಪೈ ಬದಿಯಡ್ಕ ವಂದಿಸಿದರು.