ಬೆದ್ರಡ್ಕದಲ್ಲಿ ಮೂಲ ನಾಗಬಿಂಬ ಪ್ರತಿಷ್ಠಾ ಕಾರ್ಯಕ್ರಮ
0
ಮಾರ್ಚ್ 03, 2019
ಕಾಸರಗೋಡು: ಶಿಥಿಲಾವಸ್ಥೆಯಲ್ಲಿದ್ದ ಬೆದ್ರಡ್ಕದ ಮೇಲಿನ ಬಳ್ಳೂರು ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಚಂದ್ರಗಿರಿ ಗೆಸ್ಟ್ ಹೌಸ್ ಸಮೀಪದ ಮೂಲ ನಾಗ ಸನ್ನಿಧಿಯನ್ನು ನವೀಕರಿಸಿ ನಾಗಬಿಂಬ ಪ್ರತಿಷ್ಠಾ ಕಲಶೋತ್ಸವವನ್ನು ನಡೆಸಲು ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ತೀರ್ಮಾನಿಸಲಾಗಿದೆ.
ಇದರ ಅಂಗವಾಗಿ ಮಾ.7 ರಂದು ಸಂಜೆ 5 ಗಂಟೆಗೆ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಗೆ ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ವಾಸ್ತು ಪೂಜೆ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ನಡೆಯಲಿದೆ.
ಮಾ.8 ರಂದು ಬೆಳಿಗ್ಗೆ 7 ಕ್ಕೆ ಗಣಹೋಮ, ಕಲಶ ಪೂಜೆ, 10.36 ರ ವೃಷಭ ಲಗ್ನ ಸುಮುಹೂರ್ತದಲ್ಲಿ ಚಿತ್ರಕೂಟದಲ್ಲಿ ಶ್ರೀ ನಾಗಬಿಂಬ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಲಿದೆ.
ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದ್ವಿತೀಯ ವಾರ್ಷಿಕ ದಿನಾಚರಣೆ ಹಾಗು ಸಾಮೂಹಿಕ ಸತ್ಯನಾರಾಯಣ ಪೂಜೆ ಮಾ.9 ರಂದು ಜರಗಲಿದೆ. ಕಾರ್ಯಕ್ರಮದಂಗವಾಗಿ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಬೆಳಿಗ್ಗೆ 9 ರಿಂದ ಗಣಹೋಮ, 10 ರಿಂದ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ ಜರಗಲಿದೆ.