ಬಲ್ಲಂಗುಡೇಲಿನಲ್ಲಿ ನಾಳೆ ತಾಳಮದ್ದಳೆ
0
ಮಾರ್ಚ್ 02, 2019
ಮಂಜೇಶ್ವರ: ಬಲ್ಲಂಗುಡೇಲು ಪಾಡಾಂಗರೆ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದಂಗವಾಗಿ ಮಾ. 4ರಂದು ಅಪರಾಹ್ನ 3.30ಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ. ದಾಮೋದರ ಶೆಟ್ಟಿ ಮಜಿಬೈಲು ಇದರ ಸೇವಾರ್ಥವಾಗಿ 43ನೇ ವರ್ಷದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಕರ್ಣಾರ್ಜುನ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದ್ದು, ಭಾಗವತರಾಗಿ ತೆಂಕಬೈಲ್ ಮುರಳೀ ಕೃಷ್ಣ ಶಾಸ್ತ್ರೀ, ಶುಭಾನಂದ ಶೆಟ್ಟಿ, ಧೀರಜ್ ರೈ ಸಂಪಾಜೆ, ಮದ್ದಳೆಯಲ್ಲಿ ಚಿಪ್ಪಾರು ರಾಜರಾಮ ಬಲ್ಲಾಳ, ಚೆಂಡೆಯಲ್ಲಿ ವಾಸುದೇವ ಮಯ್ಯ ವರ್ಕಾಡಿ ಭಾಗವಹಿಸುವರು. ಪಾತ್ರವರ್ಗದಲ್ಲಿ ಶ್ರೀ ಕೃಷ್ಣ- ವಿನಯ ಆಚಾರ್ಯ ಸುರತ್ಕಲ್, ಅರ್ಜುನ- ದಿನೇಶ್ ಶೆಟ್ಟಿ ಕಾವಳಕಟ್ಟೆ, ಕರ್ಣ- ಸದಾಶಿವ ಆಳ್ವ ತಲಪಾಡಿ, ಅಶ್ವಸೇನ- ರಮೇಶ ಶೆಟ್ಟಿ ಕುಂಜತ್ತೂರು, ಶಲ್ಯ- ನ್ಯಾಯವಾದಿ. ದಾಮೋದರ ಶೆಟ್ಟಿ ಮಜಿಬೈಲು ಭಾಗವಹಿಸಲಿರುವರು. ಈ ವೇಳೆ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿರುವ ಕೌಡೂರು ಬೀಡು ಮಾರಪ್ಪ ಭಂಡಾರಿ, ಶೇಖರ .ಎಮ್ ಸೊೈಪಕಲ್ಲುರವರನ್ನು ಸನ್ಮಾನಿಸಲಾಯಿತು.