ಮಂಗಲ್ಪಾಡಿ ಬಂಟರ ಸಂಘ ಕಾರ್ಯಾಲಯ ಉದ್ಘಾಟನೆ
0
ಮಾರ್ಚ್ 02, 2019
ಉಪ್ಪಳ: ಬಂಟರ ಸಂಘ ಮಂಗಲ್ಪಾಡಿ ಇದರ ಕಾರ್ಯಾಲಯ ಉದ್ಘಾಟನೆ ಉಪ್ಪಳ ಸಮೀಪದ ಕೈಕಂಬ ಕೋಡಿಬೈಲು ಚೇಂಬರ್‍ನಲ್ಲಿ ಇತ್ತೀಚೆಗೆ ಜರಗಿತು.
ನೂತನ ಕಾರ್ಯಾಲಯದ ಉದ್ಘಾಟನೆಯನ್ನು ಬಂಟ ಸಮಾಜದ ಹಿರಿಯರು, ನಿವೃತ್ತ ಪತ್ರಕರ್ತರು ಆದ ಮಲಾರ್ ಜಯರಾಮ ರೈ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷರಾದ ಶ್ರೀಧರ ಶೆಟ್ಟಿ ಮುಟ್ಟಂ ವಹಿಸಿದ್ದರು. ಬಂಟರ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಕೋಡಿಬೈಲು ನಾರಾಯಣ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಹಿರಿಯರಾದ ಮುತ್ತಣ್ಣ ಭಂಡಾರಿ, ಮಡಂದೂರು ಸೀತಾರಾಮ ಶೆಟ್ಟಿ, ಕಟ್ಟಡ ಸಮಿತಿ ಲೆಕ್ಕಪರಿಶೋಧಕರಾದ ಮೀನಾರು ರಘುರಾಮ ಆಳ್ವ, ಸಣ್ಣಹಿತ್ತಿಲು ಕೊರಗಪ್ಪ ಶೆಟ್ಟಿ, ಕಟ್ಟಡ ಸಮಿತಿ ಪ್ರಧಾನ ಕಾರ್ಯದರ್ಶಿ ಮುಳಿಂಜ ಗುತ್ತು ಪದ್ಮನಾಭ ಭಂಡಾರಿ, ಮಾತೃ ಮಂಡಳಿ ಅಧ್ಯಕ್ಷೆ ಸಣ್ಣಹಿತ್ತಿಲು ಸುಜಾತ ಕೊರಗಪ್ಪ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ಸಮಂತ್ ಶೆಟ್ಟಿ ಹಿತ್ತಿಲು ಭಾಗವಹಿಸಿದರು. ಮಂಗಲ್ಪಾಡಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ ಹಿತ್ತಿಲು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಾಜೇಶ್ ನಾಯ್ಕ್ ವಂದಿಸಿದರು.