ಕಾಸರಗೋಡು: ಇತ್ತೀಚೆಗೆ ನಿಧನ ಹೊಂದಿದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಸ್ಥಾಪಕ ಸದಸ್ಯ, ಸಂಘದ ಪೂರ್ವಾಧ್ಯಕ್ಷ ಪಿ.ಮೋಹನ್ ರಾವ್ ಅವರಿಗೆ ಕಾಸರಗೋಡಿನ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಮಾ.31 ರಂದು ನುಡಿನಮನ ಕಾರ್ಯಕ್ರಮ ನಡೆಯುವುದು.
ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರೂ, ಶಾಲಾ ಪ್ರಬಂಧಕರೂ, ಸಾಂಸ್ಕøತಿಕ ಮುಂದಾಳುವೂ ಆಗಿದ್ದ ಮೋಹನ್ ರಾವ್ ಅವರಿಗೆ ಅವರ ಒಡನಾಡಿಗಳು, ಆತ್ಮೀಯರು ನುಡಿನಮನ ಸಲ್ಲಿಸುವರು. ಪಿ.ಮೋಹನ್ ರಾವ್ ಅಭಿಮಾನಿಗಳು, ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಅಧ್ಯಾಪಕರ ಸಂಘವು ವಿನಂತಿಸಿದೆ.
ಕನ್ನಡ ಅಧ್ಯಾಪಕ ಭವನದಲ್ಲಿ ಪಿ.ಮೋಹನ ರಾವ್ ಅವರಿಗೆ ನುಡಿನಮನ ನಾಳೆ
0
ಮಾರ್ಚ್ 30, 2019