ಕುಂಟಂಗೇರಡ್ಕದಲ್ಲಿ ಉಜ್ವಲ ಯೋಜನೆಯ ಅನಿಲ ಸಂಪರ್ಕ ವಿತರಣೆ
0
ಮಾರ್ಚ್ 06, 2019
ಕುಂಬಳೆ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕುಂಬಳೆ ಸಮೀಪದ ಕುಂಟಂಗೇರಡ್ಕ ಶ್ರೀಗೋಪಾಲಕೃಷ್ಣ ಭಜನಾ ಮಂದಿರ ಪರಿಸರದಲ್ಲಿ ಮಂಗಳವಾರ ಆರು ಮಂದಿ ಗ್ರಾಹಕರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುರಳೀ ಮಾಸ್ತರ್ ಮಧೂರು ಹಾಗೂ ನಿವೃತ್ತ ಪೋಲೀಸ್ ಅಧಿಕಾರಿ ರಾಮಕೃಷ್ಣ ಅವರು ಉಜ್ವಲ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿ ಮಾತನಾಡಿದರು. ಶ್ರೀವಿದ್ಯಾ, ಸುರೇಶ್ ಶಾಂತಿಪಳ್ಳ, ಪ್ರೇಮಲತಾ ಕುಂಟಂಗೇರಡ್ಕ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಭಾಗ್ಯರಾಜ ಕುಂಬಳೆಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವರುಣ್ ಕುಮಾರ್ ಕುಂಟಂಗೇರಡ್ಕ ವಂದಿಸಿದರು.