ಚುನಾವಣೆ : ಪ್ರಚಾರ ವೈಭವದಿಂದ ನಡೆಸಬಹುದು: ಆದರೆ ಸ್ಪಷ್ಟ ಗಣನೆಗಳು ಬೇಕು-ಲೆಕ್ಕಾಚಾರದ ಮಾಹಿತಿ ಇಲ್ಲಿದೆ
0
ಮಾರ್ಚ್ 30, 2019
ಕಾಸರಗೋಡು: ಲೋಕಸಭೆ ಚುನಾವಣೆ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಪ್ರತಿ ವಿಧಾನಸಭೆ ಕ್ಷೇತ್ರಗಳಿಗೆ ತೆರಳುವ ವೇಳೆ ವೆಚ್ಚ ಮಾಡುವ ಮೊಬಲಗಿನ ಸ್ಪಷ್ಟ ಗಣನೆ ನಿರೀಕ್ಷಣೆಗೆ ಚುನಾವಣೆ ಸಿಬ್ಬಂದಿ ತೊಡಗಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಪ್ರಚಾರಕ್ಕಾಗಿ ಬಳಸುವ ವಿವಿಧ ಸಾಮಾಗ್ರಿಗಳ ಸ್ಪಷ್ಟ ಗಣನೆ ದಾಖಲಿಸಬೇಕು. ಈ ನಿಟ್ಟಿನಲ್ಲಿ 90 ಸಾಮಾಗ್ರಿಗಳ ಬೆಲೆಯ ಪಟ್ಟಿ ಈಗಾಗಲೇ ಪ್ರಕಟಿಸಲಾಗಿದೆ. ಪ್ರಚಾರ ಕಾರ್ಯಕ್ರಮಗಳು ನಡೆಯುವ ವೇದಿಕೆಗಳಲ್ಲಿ ಬಲಸಲಾಗುವ ಪುಟ್ಟ್ ಗಾತ್ರದ ಕೂಲರ್ ಗೆ ಬಾಡಿಗೆ ದರ 500 ರೂ., ದೊಡ್ಡ ಗಾತ್ರದ್ದ್ಕ್ಕೆ ಒಂದು ಸಾವಿರ ರೂ. ಗಣನೆ ಮಾಡಲಾಗುವುದು. ತೋರಣ ಲಂಕಾರಕ್ಕೆ ಒಂದು ಅಡಿಗೆ 4 ರೂ.ನಂತೆ ಗಣನೆ ಮಡಲಾಗುವುದು. ಬಟ್ಟೆಯಿಂದ ಸಿದ್ಧಪಡಿಸಿದ ಬೋರ್ಡ್ ಗೆ ಅಡಿಯೊಂದಕ್ಕೆ 30 ರೂ., ಮರದಿಂದ ಫ್ರೇಂ ಮಾಡುವುದಿದ್ದರೆ 40 ರೂ. ವೆಚ್ಚಗಣನೆ ಮಾಡಲಾಗುವುದು. ಮರದಿಂದ ನಿರ್ಮಿಸುವ ಕಟ್ ಔಟ್ ಅಡಿಯೊಂದಕ್ಕೆ 110 ರೂ., ಬಟ್ಟೆಯ ಪತಾಕೆಗೆ ಒಂದು ಅಡಿಗೆ 22 ರೂ. ದರ ನಿಗದಿ ಪಡಸಿಲಾಗಿದೆ. ಕಿರು ಗೇಟುಗಳಿಗೆ 3 ಸಾವಿರ ರೂ., ಆಡಿಯೋ ಗಾನಗಳಿಗೆ ಹಾಡುಗಾರ ಒಬ್ಬರಿಗೆ 5 ಸಾವಿರ ರೂ., ಇಬ್ಬರಿಗೆ 10 ಸಾವಿರ ರೂ., ಚೆಂಡೆ ಮೇಳದಲ್ಲಿ ಭಾಗವಹಿಸಲು ಒಬ್ಬರಿಗೆ ತಲಾ 500 ರೂ., ಟ್ಯೂಬ್ ಲೈಟ್ ಒಂದಕ್ಕೆ 10, ಹೆಲೋಜಿನ್ ಲೈಟ್ ಗೆ 200 ರೂ., ಎಲ್.ಇ.ಡಿ.ಟಿ.ವಿ. ಒಂದಕ್ಕೆ 250 , ವೀಡಿಯೋ ವಾಲ್ ಕಿರಿಯದು ದಿನಕ್ಕೆ 6 ಸಾವಿರ ರೂ., ದೊಡ್ಡದಕ್ಕೆ 9 ಸಾವಿರ ರೂ. ದರ ನಿಗದಿಪಡಿಸಲಾಗಿದೆ.
ಜನರೇಟರ್ 15 ಕೆ.ವಿ.ಗೆ 3 ಸಾವಿರ ರೂ., ಸಭಾಂಗಣಕ್ಕೆ ನಗರದಲ್ಲಿ 500 ಜನರ ಸಾಮಥ್ರ್ಯದ್ದಕ್ಕೆ 10 ಸಾವಿರ ರೂ., ಪಂಚಾಯತ್ ಮಟ್ಟದಲ್ಲಿ 5 ಸಾವಿರ ರೂ. ಬಾಡಿಗೆ ನಿಗದಿ ಪಡಿಸಲಾಗಿದೆ. ನೇತಾರರನ್ನು,ಅಭ್ಯರ್ಥಿಗಳನ್ನುಕಾರ್ಪೆಟ್ ಹಾಸಿ ಸ್ವಾಗತ ಮಾಡುವ ಉದ್ದೇಶಗಳಿದ್ದರೆ ಸ್ವಾರ್ ಫೀಟ್ ಗೆ 5 ರೂ. ದರ ಗಣನೆ ಮಾಡಲಾಗುವುದು. ತಾತ್ಕಾಲಿಕ ಚುನಾವಣೆ ಕಚೇರಿ ಬೂತ್ ಗಳಿಗೆ ಒಂದು ಸಾವಿರ ರೂ., ಫೆಡಸಲ್ ಫ್ಯಾನ್ ಗೆ ದಿನವೊಂದಕ್ಕೆ 200 ರೂ., ಹವಾನಿಯಂತ್ರಿತ ಕೊಠಡಿಗಳಿಗೆ ದಿನ್ಕಕೆ ಒಂದು ಸಾವಿರ ರೂ.,ಹವಾನಿಯಂತ್ರಿತ ರಹಿತ ಕೊಠಡಿಗಳಿಗೆ 600 ರೂ., ದರ ನಿಗದಿಪಡಿಸಲಾಗಿದೆ.
Éೂೀಲ್ಡಿಂಗ್ಸ್ ಅಡಿಯೊಂದಕ್ಕೆ 110 ರೂ., 7 ಮಂದಿ ಕುಳಿತುಕೊಳ್ಳಬುದಾದ ವೇದಿಕೆಗೆ 2 ಸಾವಿರ ರೂ., 15 ಮಂದಿ ಕುಳಿತುಕೊಳ್ಳಬಹುದಾದ ವೇದಿಕೆಗೆ 4 ಸಾವಿರ ರೂ., ದೊಡ್ಡ ಗಾತ್ರದ ವೇದಿಕೆಗೆ 7500 ರೂ. ದರವಿದೆ. ವಾಹನಗಳಲ್ಲಿ ವೇದಿಕೆ ಬಳಸುವುದಿದ್ದಲ್ಲಿ 5 ಸಾವಿರ ರೂ. ದರವಿರುವುದು.
ಮುತ್ತುಕೊಡೆಯೊಂದಕ್ಕೆ 150 , ನೆಟ್ಟಿಪಟ್ಟಂ ಒಂದಕ್ಕೆ 1500 ರೂ. ಇರುವುದು. ವಿವಿಧ ರೀತಿಯ ಭಿತ್ತಿಪತ್ರಗಳಿಗೂ ಬೇರೆ ಬೇರೆ ದರ ಇಗದಿಪಡಿಸಲಾಗಿದೆ. ಪ್ರಚಾರಕ್ಕೆ ಬಸ್ ಬಳಸುವುದಿದ್ದರೆ ದಿನಕ್ಕೆ 6 ಸಾವಿರ ರೂ., ಕಾರು,ಜೀಪು ಬಳಸುವುದಿದ್ದರೆ 2 ಸಾವಿರ ರೂ., ಎಂಪೋ, ಟ್ರಕ್ ಬಲಸುವುದಿದ್ದರೆ 3 ಸಾವಿರ ರೂ. ನಿಗದಿಪಡಿಸಲಾಗಿದೆ. ವೆಬ್ ಸೈಟ್ ಪೋಸ್ಟ್ ಗೆ ದರ 500 ರೂ., ಮಧ್ಯಾಹ್ನ ಬೋಜನಕ್ಕೆ ಒಬ್ಬರಿಗೆ 50 ರೂ., ಬಿರಿಯಾಣಿ(ಸಸ್ಯಾಹಾರಿ)75 ರೂ., ಮಾಂಸಾಹಾರಿಗೆ 130 ರೂ.ದರ ನಿಗದಿಪಡಿಸಲಾಗಿದೆ.
ಎಲ್ಲ ಖರ್ಚು-ವೆಚ್ಚಗಳು ಸೇರಿ ಕ್ಷೇತ್ರಗಳಲ್ಲಿ ಅಭ್ಯರ್ಥಿಯೊಬ್ಬರು ನಡೆಸಬಹುದಾದ ವೆಚ್ಚ 70 ಲಕ್ಷ ರೂ. ಆಗಿದೆ.