ಬಾಯಾರು ಹೆದ್ದಾರಿ ಶಾಲೆ - ಸಯನ್ಸ್ ಪಾರ್ಕ್ ಉದ್ಘಾಟನೆ
0
ಮಾರ್ಚ್ 30, 2019
ಉಪ್ಪಳ: ಬಾಯಾರು ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಂಗವಾಗಿ ಕೊಡುಗೆಯಾದ ಸಯನ್ಸ್ ಪಾರ್ಕನ್ನು ಪೈವಳಿಕೆ ಗ್ರಾಮ ಪಂಚಾಯತು ಸದಸ್ಯೆ ಭವ್ಯ ಉದ್ಘಾಟಿಸಿದರು.
ಶಾಲಾ ಶಿಕ್ಷಕ - ರಕ್ಷಕ ಸಂಘದ ಅಧ್ಯಕ್ಷ ಯು.ಶಂಕರ ಭಟ್, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್, ಮಾತೃ ಸಂಘದ ಅಧ್ಯಕ್ಷೆ ಭಾಗೀರತಿ, ಮಂಜೇಶ್ವರ ಬಿ.ಆರ್.ಸಿ. ತರಬೇತುದಾರ ಗುರುಪ್ರಸಾದ್ ರೈ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಟ್ನಬೆಟ್ಟು ಮೋನಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ವಿಜ್ಞಾನ ಶಿಕ್ಷಕ ಮುರಳೀಧರ್ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಆದಿನಾರಾಯಣ ಭಟ್ ವಂದಿಸಿದರು. ವಿಜ್ಞಾನದ ಕೌತುಕ ಬೆಳೆಸುವ, ಸಂಶೋಧನಾತ್ಮಕ ಕಲಿಕೆಗೆ ಸಹಾಯಕವಾದ ಅರುವತ್ತಕ್ಕೂ ಮಿಕ್ಕಿದ ಉಪಕರಣಗಳು ಈ ಸಯನ್ಸ್ ಪಾರ್ಕ್‍ನಲ್ಲಿ ವಿದ್ಯಾರ್ಥಿಗಳ ವೀಕ್ಷಣೆಗೆ ಲಭ್ಯವಾಗುವುದು.