ಜಿಲ್ಲಾ ಮಟ್ಟದ ಇನ್ನೊವರ್ಸ್ ಮೀಟ್ ಕಾರ್ಯಕ್ರಮ
0
ಮಾರ್ಚ್ 02, 2019
ಕಾಸರಗೋಡು: ಜಿಲ್ಲಾ ಪಂಚಾಯತಿ ಮತ್ತು ಉದ್ದಿಮೆ ಕೇಂದ್ರ ಜಂಟಿ ವತಿಯಿಂದ ಜಿಲ್ಲಾ ಮಟ್ಟದ ಇನ್ನೊವರ್ಸ್ ಮೀಟ್-2019 ಮಾನ್ಯ ವಿನ್ ಟಚ್ ಪಾಂ ಮೆಡಾಸ್ ಸಭಾಂಗಣದಲ್ಲಿ ಶುಕ್ರವಾರ ಜರುಗಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರದಾನ ಭಾಷಣ ಮಾಡಿದರು. ಜಿಲ್ಲಾ ಪಂಚಾಯತಿ ಲೋಕೋಪಯೋಗಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫರೀದಾ ಝಕೀರ್, ಸದಸ್ಯರಾದ ಕೇಳು ಪಣಿಕ್ಕರ್, ಪುಷ್ಪಾ ಅಮೆಕ್ಕಳ, ಕಾರ್ಯದರ್ಶಿ ಪಿ.ನಂದಕುಮಾರ್, ಕೆ.ಎಸ್.ಎಸ್.ಐ.ಎ. ಜಿಲ್ಲಾ ಅಧ್ಯಕ್ಷೆ ಬಿಂದು ಸಿ., ಪ್ರಧಾನ ಮಂಡಳಿ ಸದಸ್ಯ ಮುಜೀಬ್ .ಕೆ.ಎನ್.ಎನ್, ಎಂ.ಸಿ.ಸಿ. ಪ್ರಧಾನ ಸಂಚಾಲಕ ಎ.ಕೆ.ಶ್ಯಾಮಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಸ್ವಾಗತಿಸಿ, ಜಿಲ್ಲಾ ಉದ್ದಿಮೆ ಕೇಂದ್ರ ಪ್ರಬಂಧಕಿ ಮಿನಿಮೋಳ್ ಸಿ.ಜಿ. ವಂದಿಸಿದರು. ನಂತರ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳು ನಡೆದುವು.