HEALTH TIPS

ಪೈವಳಿಕೆ ಗ್ರಾ.ಪಂ.ನಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಮತದಾರರಿರುವ ಮತಗಟ್ಟೆ

ಮಂಜೇಶ್ವರ: ಲೋಕಸಭಾ ಚುನಾವಣೆಯ ಸಿದ್ದತೆಗಳು ಭರದಿಂದ ಸಾಗುತ್ತಿರುವಂತೆ ಕುತೂಹಲಕಾರಿ ವಿಷಯಗಳೂ ಗಮನಕ್ಕೆ ಬರುತ್ತಿವೆ. ಜಿಲ್ಲೆಯಲ್ಲಿ ಅತ್ಯಧಿಕ ಮತದಾರರಿರುವ ಮತಗಟ್ಟೆ ಪೈವಳಿಕೆ ಗ್ರಾಮಪಂಚಾಯತಿಯ ಪೈವಳಿಕೆ ನಗರ ಸರಕಾರಿ ಫ್ರೌಢಶಾಲೆ ಎನ್ನುವುದು ಗಮನಾರ್ಹ ಅಂಶವಾಗಿರುವುದಾಗಿ ಅಧಿಕಾರಿಗಳು ಗುರುತಿಸಿದ್ದಾರೆ. ಪೈವಳಿಕೆ ಸರಕಾರಿ ಪ್ರೌಢಶಾಲೆಯ 105ನೇ ನಂಬ್ರದಲ್ಲಿ ಅತ್ಯಧಿಕ ಪ್ರಮಾಣದ ಮತದಾರರಿದ್ದಾರೆ. ಈ ವರೆಗೆ ಮತದಾರರ ಪಟ್ಟಿಯಲ್ಲಿ 1385 ಮತದಾರರು ಇಲ್ಲಿ ಹೆಸರು ಹೊಂದಿದ್ದಾರೆ. ಇವರಲ್ಲಿ 696 ಪುರುಷರು, 689 ಮಹಿಳೆಯರು ಇದ್ದಾರೆ. ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರರಿರುವ ಮತಗಟ್ಟೆ ವಲಿಯ ಪರಂಬ ಗ್ರಾಮಪಂಚಾಯತಿಯಲ್ಲಿರುವುದಾಗಿ ಗುರುತಿಸಲಾಗಿದೆ. ವಲಿಯ ಪರಂಬ ಅಂಗನವಾಡಿ ಕಟ್ಟಡದಲ್ಲಿರುವ 151ನೇ ಮತಗಟ್ಟೆಯಲ್ಲಿ ಕಡಿಮೆ ಪ್ರಮಣದ ಮತದಾರರು ಹೆಸರು ಹೊಂದಿದ್ದಾರೆ. ಈ ಬೂತ್ ನಲ್ಲಿ 226 ಮಂದಿ ಮತದಾರರಿದ್ದಾರೆ. ಇವರಲ್ಲಿ 117 ಮಂದಿ ಮಹಿಳೆಯರು, 109 ಪುರುಷರೂ ಇದ್ದಾರೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಅತಿ ಕಡಿಮೆ ಮತದಾರರಿರುವ ಬೂತ್ ಸ್ವರ್ಗ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿದೆ. ಇಲ್ಲಿನ 194ನೇ ಮತಗಟ್ಟೆಯಲ್ಲಿ 615 ಮಂದಿ ಮತದಾರರಿದ್ದಾರೆ. ಕಾಸರಗೋಡು ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಅತ್ಯಧಿಕ ಪ್ರಮಾಣದ ಮತದಾರರಿರುವ ಮತಗಟ್ಟೆ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಾಗಿದೆ. ಇಲ್ಲಿ 1346 ಮತದಾರರಿದ್ದಾರೆ. ಈ ಶಾಲೆಯ 125ನೇ ಮತಗಟ್ಟೆಯಲ್ಲಿ ಈ ಮತದಾರರು ಇದ್ದಾರೆ. ಉದಯಗಿರಿ ಎಸ್.ಎಸ್.ಪಿ.ಎ.ಎಲ್.ಪಿ. ಶಾಲೆಯ 50ನೇ ನಂಬ್ರ ಬೂತ್ ನಲ್ಲಿ ಮತದಾರರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇಲ್ಲಿ 310 ಮತದಾರರಿದ್ದಾರೆ. ಉದುಮಾ ವಿಧಾನಸಭೆ ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮತದಾರರಿರುವ ಮತಗಟ್ಟೆ ಪಾಕಂ ಜಿ.ಎಚ್.ಎಸ್.ನ 113 ನೇ ನಂಬ್ರ ಬೂತ್ ಆಗಿದೆ. ಇಲ್ಲಿ 1370 ಮಂದಿ ಮತದಾರರಿದ್ದಾರೆ. ಅತಿ ಕಡಿಮೆ ಮತದಾರರು ಇರುವುದು ಉದುಮಾ ಜಿ.ಎಸ್.ಎಸ್.ಎಸ್.ನ 90ನೇ ನಂಬ್ರ ಬೂತ್ನಲ್ಲಿ. ಇಲ್ಲಿ 434 ಮತದರರಿದ್ದಾರೆ. ಕಾಞÂಂಗಾಡ್ ವಿಧಾನಸಭಾ ಕಷೇತ್ರದಲ್ಲಿ ಅತ್ಯಧಿಕ ಪ್ರಮಾಣದ ಮತದಾರರಿರುವ ಮತಗಟ್ಟೆ ಪಿ.ಪಿ.ಟಿ.ಎಸ್.ಎ.ಎಲ್.ಪಿ.ಶಾಲೆಯ 151ನೇ ಮತಗಟ್ಟೆಯಾಗಿದೆ. ಇಲ್ಲಿ 1332 ಮತದಾರರಿದ್ದಾರೆ. ಅತಿ ಕಡಿಮೆ ಮತದಾರರು ಪೆರಿಯಂಗಾನಂ ಜಿ.ಎಲ್.ಪಿ.ಶಾಲೆಯ 189ನೇ ನಂಬ್ರ ಮತಗಟ್ಟೆಯಲ್ಲಿ. 577 ಮತದಾರರು ಇಲ್ಲಿದ್ದಾರೆ. ತ್ರಿಕರಿಪುರ ಕ್ಷೇತ್ರದಲ್ಲಿ ಅತ್ಯಧಿಕ ಮತದಾರರಿರುವ ಮತಗಟ್ಟೆ ಪಡನ್ನ ಜಿ.ಎಫ್.ಎಚ್.ಎಸ್.ಎಸ್.ನ 153ನೇ ಮತಗಟ್ಟೆಯಲ್ಲಿ. ಇಲ್ಲಿ 1322 ಮತದಾರರಿದ್ದಾರೆ. ಜಿಲ್ಲೆಯಲ್ಲಿ 5 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 968 ಮತಗಟ್ಟೆಗಳಿವೆ. ಚುನಾವಣೆ ಆಯೋಗದ ಆದೇಶ ಪ್ರಕಾರ ಎಲ್ಲ ಕಡೆ ಮೂಲಭೂತ ಸೌಲಭ್ಯ ಏರ್ಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries