ವಿಕಲ ಚೇತನರಿಗೆ ಸ್ಕೂಟರ್ ವಿತರಣೆ
0
ಮಾರ್ಚ್ 06, 2019
ಬದಿಯಡ್ಕ: ವಿಕಲಚೇತನರು ಎಲ್ಲರಂತೆ ಜೀವನದ ಪಯಣವನ್ನು ಮುನ್ನಡೆಸಬೇಕು ಎಂಬ ಉದ್ದೇಶವನ್ನಿರಿಸಿ ಅವರಿಗಾಗಿ ವಿಶೇಷ ವಾಹನಗಳನ್ನು ನೀಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಮಂಗಳವಾರ ಬದಿಯಡ್ಕ ಗ್ರಾಮಪಂಚಾಯತಿ ವತಿಯಿಂದ 2018-19ನೇ ಸಾಲಿನ ಅರ್ಹ ಫಲಾನುಭವಿಗಳಾದ 7ಮಂದಿ ವಿಕಲಚೇತನರಿಗೆ ವಿಶೇಷ ದ್ವಿಚಕ್ರ ವಾಹನವನ್ನು ವಿತರಿಸಿ ಅವರು ಮಾತನಾಡಿದರು.
ಸಾಮಾನ್ಯ ನಾಗರಿಕರಂತೆ ಅವರೂ ಬದುಕುವುದರೊಂದಿಗೆ ತಮ್ಮ ಕುಟುಂಬವನ್ನು ಮುನ್ನಡೆಸಲು ಈ ವಾಹನವು ಸಹಕಾರಿಯಾಗಲಿ ಎಂದು ಅವರು ಹಾರೈಸಿದರು.
ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸೈಬುನ್ನೀಸ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನ್ವರ್ ಓಸೋನ್, ಶ್ಯಾಮಪ್ರಸಾದ ಮಾನ್ಯ, ಗ್ರಾಮಪಂಚಾಯತಿ ಸದಸ್ಯರುಗಳಾದ ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ಶೆಟ್ಟಿ ಕಡಾರು, ಮುನೀರ್ ಉಪಸ್ಥಿತರಿದ್ದು ಮಾತನಾಡಿದರು. ಒಟ್ಟು ಏಳುಮಂದಿ ಫಲಾನುಭವಿಗಳಿಗೆ ಹೀರೋ ಕಂಪೆನಿಯ ಸ್ಕೂಟರ್ ವಿತರಿಸಲಾಯಿತು. ಆಯ್ಕೆ ಸಮಿತಿಯ ಐಸಿಡಿಎಸ್‍ನ ಜ್ಯೋತಿ ಸ್ವಾಗತಿಸಿ, ಭವ್ಯ ವಂದಿಸಿದರು.